ಕರಾವಳಿ

ಮರಕ್ಕೆ ಹತ್ತಿ ರಾಮಪತ್ರೆ ಕೊಯ್ಯುತ್ತಿದ್ದಾಗ ಜಾರಿ ಬಿದ್ದ ವ್ಯಕ್ತಿ,ಆಸ್ಪತ್ರೆ ತಲುಪುವ ಮುನ್ನವೇ ನಿಧನ

427

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಮರದಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಡಬ ತಾಲೂಕು ಬಳ್ಪ ಗ್ರಾಮದ ಕುಂಜತ್ತಾಡಿ ಮನೆ ದಾಮೋದರ ಗೌಡ (57) ಮೃತ ದುರ್ದೈವಿ.ಮೃತರು ಮರಕ್ಕೆ ಹತ್ತಿ ರಾಮಪತ್ರೆ ಕೊಯ್ಯುತ್ತಿದ್ದರು ಎನ್ನಲಾಗಿದೆ.

ಏನಿದು ಘಟನೆ?


ದಾಮೋದರ ಗೌಡ ಅವರು ರಾಮ ಪತ್ರೆ ಕೊಯ್ಯಲೆಂದು ಮರವನ್ನು ಹತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕಳಗ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಾರೊಂದರಲ್ಲಿ ಕರೆದುಕೊಂಡು ಹೋಗಲಾಗಿದೆ. ಬಳಿಕ ಪಂಜದಲ್ಲಿ ಸಿಕ್ಕಿದ ಖಾಸಗಿ ಅಂಬುಲೆನ್ಸ್ ಮೂಲಕ ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ ಅದಾಗಲೇ ದಾಮೋದರ ಗೌಡ ಅವರು ಮೃತ ಪಟ್ಟಿದ್ದಾರೆಂದು ವೈದ್ಯರು ಪರೀಕ್ಷಿಸಿ ತಿಳಿಸಿದರು ಎಂದು ತಿಳಿದು ಬಂದಿದೆ.ಈ ಬಗ್ಗೆ ಮೃತರ ಪತ್ನಿ ರುಕ್ಮಿಣಿ ಅವರು ನೀಡಿದದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಇಂದಿನಿಂದ ಸುಳ್ಯದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ವೈಭವ:ಎರಡು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ,ವಿವಿಧ ಗಣ್ಯರ ಉಪಸ್ಥಿತಿ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget