ಕ್ರೈಂ

ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಮಲ್ಪೆಯ ಜೀವರಕ್ಷಕ ತಂಡ

927

ಮಲ್ಪೆ: ಸಮುದ್ರದಲ್ಲಿ ಆಡುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತಿದ್ದ ಮೂವರನ್ನು ಮಲ್ಪೆಯ ಜೀವರಕ್ಷಕ ತಂಡದ ಸದಸ್ಯರು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಿಸಿದ ಘಟನೆ ವರದಿಯಾಗಿದೆ. ಕೊಪ್ಪಳ ಜಿಲ್ಲೆ ಬನಕಟ್ಟಿ ಗ್ರಾಮದ ಮೂವರು ಪ್ರವಾಸಿಗರು ಉಡುಪಿಗೆ ಪ್ರವಾಸಕ್ಕೆಂದು ಬಂದಿದ್ದು, ಗುರುವಾರ ಸುಮಾರು ಸಂಜೆ 5:20ಕ್ಕೆ ಮಲ್ಪೆಯ ಸಮುದ್ರದಲ್ಲಿ ಇಳಿದು ಆಡುತ್ತಿದ್ದರು.ಈ ವೇಳೆಯಲ್ಲಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ರಕ್ಷಣೆಗೆ ಧುಮುಕಿದ ಮಲ್ಪೆ ಲೈಫ್ ಗಾರ್ಡ್ ಸದಸ್ಯರು ಪವನ್ ಮಡಿಲಾ (21), ಚೇತನ (19) ಹಾಗೂ ಪ್ರಿಯದರ್ಶಿನಿ (20) ಇವರನ್ನು ರಕ್ಷಿಸಿ ಸುರಕ್ಷಿತವಾಗಿ ಮೇಲಕ್ಕೆ ಕರೆ ತಂದರು.

See also  ಸುಳ್ಯದಲ್ಲಿ ತಂಬಾಕು, ಗುಟ್ಕಾ ಮಾರಾಟ ವಿರುದ್ಧ ಮಿಂಚಿನ ಕಾರ್ಯಾಚರಣೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget