ಕ್ರೈಂ

ಮಾಲಿ ಉಗ್ರರಿಂದ ವಿಶ್ವಸಂಸ್ಥೆಯ 7 ಶಾಂತಿಪಾಲಕರ ಭೀಕರ ಹತ್ಯೆ

703

ವಿಶ್ವಸಂಸ್ಥೆ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಏಳು ಶಾಂತಿಪಾಲಕರು ಮರಣ ಹೊಂದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟಿಫನ್ ಡುಜಾರಿಕ್ ತಿಳಿಸಿದ್ದಾರೆ. ಟೊಗೊದಿಂದ ಬಂದಿದ್ದ ಶಾಂತಿಪಾಲನಾ ತಂಡ ಬುಧವಾರ ಮಾಲಿಯ ಬಾಂಡೈಗ್ರಾ ಪ್ರಾಂತ್ಯದಲ್ಲಿ ಡೌಂಟ್ಜಾದಿಂದ ಸಿವೆರಾಕ್ಕೆ ವಾಹನದಲ್ಲಿ ತೆರಳುತಿತ್ತು. ಈ ವೇಳೆ ಸಿವೆರಾ ಬಳಿ ಸುಧಾರಿತ ಸ್ಪೋಟಕದಿಂದ ಉಗ್ರರು ವಾಹನವನ್ನು ಸ್ಪೋಟಿಸಿ ಶಾಂತಿಪಾಲಕರನ್ನು ಕೊಂದಿದ್ದಾರೆ. 

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲೆ ನಡೆದ ಅತಿದೊಡ್ಡ ದಾಳಿ ಇದು ಎಂದು ಸ್ಟಿಫನ್ ಡುಜಾರಿಕ್ ತಿಳಿಸಿದ್ದಾರೆ.

See also  ಮಡಿಕೇರಿ: ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ! ಸುಂಕ ವಸೂಲಿಗಾರರಿಂದ ಕೃತ್ಯ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget