ಮಡಿಕೇರಿ : ಕರಪತ್ರ ಹಂಚಿ ಕ್ರೈಸ್ತ ಧರ್ಮ, ಬೈಬಲ್ ಮತ್ತು ಏಸುವನ್ನು ಮಾತ್ರ ನಂಬಿ ಎಂದು ಪ್ರಚಾರ ಮಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಮಡಿಕೇರಿಯಲ್ಲಿಂದು ನಡೆದಿದೆ. ಜನರಲ್ ತಿಮ್ಮಯ್ಯ ವೃತ್ತದ ಸುತ್ತಮುತ್ತಲಿನ ಅಂಗಡಿಗಳಿಗೆ ತೆರಳಿದ ಈ ಮಹಿಳೆ ಅಲ್ಲಿದ್ದವರಿಗೆ ಕರಪತ್ರ ನೀಡಿ, ವಿಜ್ಙಾನ ಇಲ್ಲ, ಎಲ್ಲವೂ ಮೂಢನಂಬಿಕೆ, ದೇವರನ್ನು ನಂಬುವುದಾದರೆ ಏಸುವನ್ನು ಮತ್ತು ಬೈಬಲ್ ಅನ್ನು ಮಾತ್ರ ನಂಬಿ ಎಂದು ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಅರಿತ ಸ್ಥಳೀಯರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಪುನಃ ಈಕೆ ಎಂದಿನಂತೆ ಪ್ರಚಾರದಲ್ಲಿ ತೊಡಗಿದ್ದರಿಂದ ತರಾಟೆಗೆ ತೆಗೆದುಕೊಂಡು ಪೋಲೀಸ್ ಠಾಣೆಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.