ಕರಾವಳಿಕ್ರೈಂ

ಮಡಿಕೇರಿ: ಬರೋಬ್ಬರಿ 56 ವರ್ಷಗಳಿಂದ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸ್ತಿದ್ದ ಆ ಆರೋಪಿ..! ಆತನ ಹುಡುಕಿಕೊಂಡು ಹೊರಟ ಬೆಳ್ತಂಗಡಿ ಪೊಲೀಸರಿಗೇ ಎದುರಾಗಿತ್ತು ಶಾಕ್..!

246

ನ್ಯೂಸ್ ನಾಟೌಟ್: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೆಲವರು ಬೇಗ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ಇನ್ನೂ ಕೆಲವರು ಪೊಲೀಸರ ಕಣ್ಣಿಗೆ ಮಣ್ಣೆರಚಿಕೊಂಡು ವರ್ಷಾನುಗಟ್ಟಲೆ ತಲೆಮರೆಸಿಕೊಂಡಿರುತ್ತಾರೆ. ಅಂತಹ ಅಪರಾಧಿಗಳಲ್ಲಿಯೇ ಕೊಡಗು ಜಿಲ್ಲೆಯ ವಿರಾಜಪೇಟೆಯ ವ್ಯಕ್ತಿಯೊಬ್ಬ ವಿಶೇಷ ಅನ್ನಬಹುದು.

ಹೌದು, ಈತ ಒಂದಲ್ಲ ಎರಡಲ್ಲ ಬರೋಬ್ಬರಿ 56 ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡೇ ಬಂದಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 245/1967 u/s 420 IPC ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಕಳೆದ 56 ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ.

ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಕಳೆದ 56 ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ. C M ರಾಮಯ್ಯ @ C M ಮಾಮು @ C M ಬಿದ್ದಪ್ಪ ಎಂಬ ಹೆಸರು ಸಹಿತ ಹಲವು ವರ್ಷಗಳಿಂದ ವಿವಿಧ ಹೆಸರುಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದ.

ಈತನ ಪತ್ತೆಗಾಗಿ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪಿಎಸ್ಐ (L&O) ಧನರಾಜ್ ಟಿ.ಎಂ. ಮತ್ತು ಪಿಎಸೈ(ತನಿಖೆ) ಚಂದ್ರಶೇಖರ್ ಎ ಎಮ್ ರವರ ನೇತೃತ್ವದಲ್ಲಿ ಹೆಚ್. ಸಿ. ಗಂಗಾಧರ್ ಬಿ. ಮತ್ತು ಹೆಚ್ .ಸಿ. ಆಶೋಕ್ ರವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಿವಿಧ ಕಡೆಗಳಲ್ಲಿ ಸಂಚರಿಸಿ ತನಿಖೆ ನಡೆಸಿದ್ದರು. ಈ ವೇಳೆ ಆರೋಪಿಯ ಮಗ ಮತ್ತು ಪತ್ನಿ ವಾಸ್ತವ್ಯವಿದ್ದ ಮನೆಯನ್ನು ಪತ್ತೆ ಹಚ್ಚಿ ಕೂಲಂಕುಷವಾಗಿ ವಿಚಾರಿಸಲಾಯಿತು.

ಸದ್ಯ ಸುದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ನಾಲ್ಕು ವರ್ಷಗಳ ಹಿಂದೆಯೇ ಮರಣವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕೊನೆಗೂ ಆತನನ್ನು ಪೊಲೀಸರು ಹಿಡಿಯಲು ಸಾಧ್ಯವಾಗಲೇ ಇಲ್ಲವಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

See also  ಬಿಜೆಪಿ ಮಂಡಲದ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget