ಕ್ರೈಂ

ಮಡಿಕೇರಿಯಲ್ಲೊಬ್ಬ ಆನೆ ದಂತಚೋರ ಅರೆಸ್ಟ್

900

ಮಡಿಕೇರಿ: ಎರಡು ಆನೆ ದಂತಗಳನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೊಡಗು ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಬಂಧಿತನನ್ನು ಕೆ.ಆರ್‌.ನಗರದ ನಿವಾಸಿ ಅಭಿಜಿತ್ (28 ) ಎಂದು ತಿಳಿಸಲಾಗಿದೆ. ಮಡಿಕೇರಿ ತಾಲೂಕಿನ ಸಂಪಿಗೆ ಕಟ್ಟೆಯಿಂದ ಸೋಮವಾರ ಪೇಟೆಗೆ ಹೋಗುವ ಜಂಕ್ಷನ್‌ ಬಳಿ ಈಗ ಅಕ್ರಮವಾಗಿ ಆನೆದಂತ ಸಾಗಿಸಿಕೊಂಡು ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎಸ್ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್ ಐ ಸಿಯು ಸವಿ, ಹೆಡ್‌ ಕಾನ್‌ಸ್ಟೇಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಚಂಗಪ್ಪ ಹಾಗೂ ಮೋಹನ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

See also  ದೇವಸ್ಥಾನಕ್ಕೆ ನುಗ್ಗಿದರೇ ಭಯೋತ್ಪಾದಕರು? ಆತನ ಕಪಾಳಕ್ಕೆ ಭಾರಿಸಿದ್ದ ಆ ವ್ಯಕ್ತಿ..! ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget