ನಮ್ಮಲ್ಲೇ ಫಸ್ಟ್

ಹಾಡು ಹಕ್ಕಿಗೆ ಬೆಂಗಳೂರಿನ ಸಮರ್ಥನಂ ಶಿಕ್ಷಣ ಸಂಸ್ಥೆ ಅಭಯ, ಶೀಘ್ರದಲ್ಲೇ ಅಂಧ ಗಾಯಕ ಬೆಂಗಳೂರಿನತ್ತ ಪ್ರಯಾಣ

ಸುಳ್ಯ: ನ್ಯೂಸ್ ನಾಟೌಟ್ ಯೂ ಟ್ಯೂಬ್ ಚಾನೆಲ್ ನಲ್ಲಿ ‘ಹಾಡು ಹಕ್ಕಿಗೆ ಕಣ್ಣಿಲ್ಲ’ ಎಂಬ ಶೀರ್ಷಿಕೆಯಡಿ ಪ್ರಸಾರವಾದ ವಿಡಿಯೋವೊಂದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಅಂಧ ಗಾಯಕ ಮಾಧವ ಚೆಂಬು ಅವರ ಗಾಯನ ಶೈಲಿಗೆ ತಲೆದೂಗಿದ ಬೆಂಗಳೂರಿನ ಸಮರ್ಥನಂ ಶಿಕ್ಷಣ ಸಂಸ್ಥೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದರು.

ಸಮರ್ಥನಂ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿದ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ

ಸಮರ್ಥನಂ ನಿರ್ದೇಶಕರಾದ ಮಹಾಂತೇಶ್ ಸೂಚನೆ ಮೇರೆಗೆ ಶಿಖಾ ಶೆಟ್ಟಿ ನೇತೃತ್ವದ ತಂಡ ಅಕ್ಟೋಬರ್ 2 ರಂದು ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿರುವ ಅವರ ಮನೆಗೆ ಭೇಟಿ ನೀಡಿತು. ಇದೇ ವೇಳೆ ಕುಟುಂಬಕ್ಕೆ ಉದ್ಯೋಗ ಭದ್ರತೆ, ಮಾಧವರಿಗೆ ಅಂಧರ ಗಾಯನ ತಂಡದಲ್ಲಿ ಪಾಲ್ಗೊಳ್ಳುವ ಅವಕಾಶ , ಬೆಂಗಳೂರಿನಲ್ಲಿ ಉಚಿತ ಊಟ ವಸತಿ ಸೌಲಭ್ಯ ಹಾಗೂ ಮಗನಿಗೆ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವ ಭರವಸೆ ನೀಡಿದ್ದಾರೆ. ಎಲ್ಲ ಅಂದು ಕೊಂಡಂತೆ ನಡೆದರೆ ಮುಂದಿನ ಕೆಲವೇ ದಿನಗಳಲ್ಲಿ ಮಾಧವ ಚೆಂಬು ಅವರು ವೃತ್ತಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಧವ ಚೆಂಬು ನ್ಯೂಸ್ ನಾಟೌಟ್ ತಂಡಕ್ಕೆ ಚಿರ ಋಣಿಯಾಗಿದ್ದೇನೆ ಎಂದು ತಿಳಿಸಿದರು.

Related posts

ಪ್ರೊ ಕಬಡ್ಡಿ ಎಂಟನೇ ಆವೃತ್ತಿ ಲೀಗ್: ಪೂರ್ಣ ಆವೃತ್ತಿಗೆ ಬೆಂಗಳೂರು ಆತಿಥ್ಯ

ಹೆಜ್ಬುಲ್ಲಾ ಮುಖ್ಯಸ್ಥ ಹೆದರಿ ಅಡಗಿದ್ದ ಬಂಕರ್ ನಲ್ಲಿ 500 ಮಿಲಿಯನ್ ಡಾಲರ್ ಹಣ, ಅಪಾರ ಪ್ರಮಾಣದ ಚಿನ್ನ ಪತ್ತೆ..! ಈ ಬಗ್ಗೆ ಇಸ್ರೇಲ್ ಹೇಳಿದ್ದೇನು..?

ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ , ನ್ಯೂಸ್‌ ನಾಟೌಟ್ ಗೆ ಪಕ್ಕಾ ಮಾಹಿತಿ