ಸಾಧಕರ ವೇದಿಕೆ

ನ್ಯೂಸ್ ನಾಟೌಟ್ ಪರಿಚಯಿಸಿದ್ದ ಗ್ರಾಮೀಣ ಪ್ರತಿಭೆ ಈಗ ಆಸ್ಟ್ರೇಲಿಯಾಕ್ಕೆ ವಿಮಾನ ಏರಲು ಸಜ್ಜು

653

ಸುಳ್ಯ: ಕೆಲವು ತಿಂಗಳ ಹಿಂದೆ ನ್ಯೂಸ್ ನಾಟೌಟ್ ಯೂ ಟ್ಯೂಬ್ ಚಾನಲ್ ಪರಿಚಯಿಸಿದ್ದ ಕಡು ಬಡತನದ ಹಿನ್ನೆಲೆಯುಳ್ಳ ಗ್ರಾಮೀಣ ಪ್ರತಿಭೆ ಇದೀಗ ವಿದೇಶಕ್ಕೆ ಹಾರಲು ಸಜ್ಜಾಗಿದೆ.

ಹೌದು, ಸೆ.30 ರಂದು ‘ಹಾಡು ಹಕ್ಕಿಗೆ ಕಣ್ಣಿಲ್ಲ’ ಎಂಬ ಶೀರ್ಷಿಕೆಯಡಿಯಲ್ಲಿ ಎಲೆ ಮರೆ ಕಾಯಿಯಂತಿದ್ದ ಅಂಧ ಗಾಯಕ ಚೆಂಬು ಮಾಧವ ಅವರ ಕಾರ್ಯಕ್ರಮವನ್ನು ನ್ಯೂಸ್ ನಾಟೌಟ್ ಯೂ ಟ್ಯೂಬ್ ಚಾನಲ್ ನಲ್ಲಿ ಪ್ರಕಟಿಸಿತ್ತು. ಅದಾದ ಬಳಿಕ ಇವರ ದುನಿಯಾ ಬದಲಾಗಿ ಹೋಗಿತ್ತು. ಮಾಧವರಿಗೆ ಅವಕಾಶಗಳ ಮಹಾಪೂರವೇ ಬೆಂಗಳೂರಿನಿಂದ ಸಿಕ್ಕಿತ್ತು. ಸಮರ್ಥನಂ ಗಾಯನ ತಂಡದ ಪ್ರತಿನಿಧಿಯಾಗಿ ದೆಹಲಿ, ಪಂಜಾಬ್ ನಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯಕ್ರಮ ನೀಡಿರುವ ಮಾಧವ ಅವರು ಇದೀಗ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವೊಂದನ್ನು ನೀಡುವುದಕ್ಕೆ ಸಮರ್ಥನಂ ಗಾಯನ ತಂಡದೊಂದಿಗೆ ಪ್ರವಾಸ ಮಾಡಲಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಫೆಬ್ರವರಿ ಎರಡನೇ ವಾರದಲ್ಲಿ ಅವರು ಕಾಂಗರೂ ನಾಡಿಗೆ ಪ್ರಯಾಣ ಬೆಳಸಲಿದ್ದಾರೆ. ಸ್ವತಃ ಇದನ್ನು ನ್ಯೂಸ್ ನಾಟೌಟ್ ಗೆ ಮಾಧವ ಅವರು ದೂರವಾಣಿ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೆ ಕನಸಲ್ಲೂ ನೆನೆಸದ ಇಂತಹದ್ದೊಂದು ಅವಕಾಶ ಕಲ್ಪಿಸಿಕೊಟ್ಟ ನ್ಯೂಸ್ ನಾಟೌಟ್ ಬಳಗಕ್ಕೆ ಜೀವನ ಪೂರ್ತಿ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.

ಮಾಧವರ ಪ್ರತಿಭೆಗೆ ವೇದಿಕೆ

ಮಾಧವ ಅವರ ಸಾಧನೆಯನ್ನು ಬೆಂಗಳೂರಿನಲ್ಲಿರುವ ಸಮರ್ಥನಂ ಅಂಗವಿಕಲರ ಶಿಕ್ಷಣ ಸಂಸ್ಥೆಯ ಗಮನಕ್ಕೆ ನ್ಯೂಸ್ ನಾಟೌಟ್ ತಂಡ ಖುದ್ದಾಗಿ ತೆಗೆದುಕೊಂಡು ಬಂದಿತ್ತು. ಆತನ ಗಾಯನ ಪ್ರತಿಭೆಯ ಬಗ್ಗೆ ಅಲ್ಲಿನ ನಿರ್ದೇಶಕರಾದ ಮಹಾಂತೇಶ್ ಅವರಿಗೆ ತಿಳಿಸಿತ್ತು. ಇದಾದ ಬಳಿಕ ಮಹಾಂತೇಶ್ ಅವರ ಸೂಚನೆ ಮೇರೆಗೆ ಅಕ್ಟೋಬರ್ ೨ರಂದು ಸಮರ್ಥ ನಂ ಶಿಕ್ಷಣ ಸಂಸ್ಥೆಯ ಅಧಿಕಾರಿಗಳಾದ ಶಿಖಾ ನೇತೃತ್ವದ ತಂಡ ಮಾಧವ ಚೆಂಬು ಅವರ ಮನೆಗೆ ಭೇಟಿ ನೀಡಿತ್ತು. ಆ ನಂತರ ಮಗನಿಗೆ ಉಚಿತ ವಿದ್ಯಾಭ್ಯಾಸ, ಮಾಧವರಿಗೆ ಬೆಂಗಳೂರಿನಲ್ಲಿ ನೌಕರಿ ನೀಡುವ ಭರವಸೆ ನೀಡಿತ್ತು. ಅಂತೆಯೇ ಮಾಧವ ಅವರು ಕಳೆದ ೨ ತಿಂಗಳಿನಿಂದ ಬೆಂಗಳೂರಿನ ಎಚ್ ಎಸ್ ಆರ್ ಲೇ ಔಟ್ ನಲ್ಲಿರುವ ಸಮರ್ಥನಂ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗೀತವನ್ನೇ ಉಸಿರಾಗಿಸಿರುವ ಅವರು ಅಲ್ಲಿನ ಸಂಗೀತ ತಂಡದಲ್ಲಿ ಗಾನ ಕೋಗಿಲೆಯಾಗಿ ಮಿಂಚುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.

See also  11ನೇ ವಯಸ್ಸಿಗೆ ಮದುವೆ, 20ನೇ ವಯಸ್ಸಿಗೆ ತಂದೆಯಾದ ವ್ಯಕ್ತಿ ನೀಟ್‌ ಪರೀಕ್ಷೆಯಲ್ಲಿ ಪಾಸ್‌! ಈತನ ಸಾಧನೆ ಎಲ್ಲರಿಗೂ ಸ್ಫೂರ್ತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget