ದೇಶ-ಪ್ರಪಂಚ

ಅಡುಗೆ ಅನಿಲ ಕನೆಕ್ಷನ್‌ ಗಾಗಿ ಡೀಲರ್‌ ಕಚೇರಿಗೆ ಅಲೆಯಬೇಕಿಲ್ಲ, ಮಿಸ್ಡ್ ಕಾಲ್‌ ಕೊಟ್ರೆ ಸಾಕು ಗ್ಯಾಸ್‌ ಸಂಪರ್ಕ..!

ನವದೆಹಲಿ: ಅಡುಗೆ ಅನಿಲ (ಎಲ್‌ಪಿಜಿ)ದ ಹೊಸ ಕನೆಕ್ಷನ್‌ಗಾಗಿ ಗ್ರಾಹಕರು ಇನ್ನು ಮುಂದೆ ಡೀಲರ್‌ ಕಚೇರಿಗೆ ಅಲೆಯಬೇಕಿಲ್ಲ. ಬದಲಾಗಿ 845 4955555 ಮಿಸ್ಡ್ ಕಾಲ್‌ ಕೊಟ್ಟರೆ ಸಾಕು ಇಂಡಿಯನ್‌ ಆಯಿಲ್ ಕಾರ್ಪೋರೇಷನ್ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಹೊಸ ಗ್ಯಾಸ್‌ ಕನೆಕ್ಷನ್ ನೀಡುತ್ತಾರೆ. ಇದರಿಂದಾಗಿ ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಸಹಾಯವಾಗಲಿದೆ. ಇನ್ನು ಹಾಲಿ ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ ರೀಫಿಲ್ ಮಾಡಿಸಿಕೊಳ್ಳಲು ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ಮಿಸ್‌ ಕಾಲ್‌ ಕೊಟ್ಟರೂ ಸಾಕು ಎಲ್‌ಪಿಜಿ ರಿಫಿಲ್ ಗಾಗಿ ಸಿಬ್ಬಂದಿ ಮನೆಗೆ ಬರಲಿದ್ದಾರೆ. ಆಸಕ್ತ ಗ್ರಾಹಕರು 14.2 ಕೆ.ಜಿ ಎಲ್‌ ಪಿಜಿ ಸಿಲಿಂಡರ್‌ ಪಡೆಯುವ ಬದಲಾಗಿ ಬ್ಯಾಕಪ್ ಆಗಿ 5 ಕೆ.ಜಿ ಸಿಲಿಂಡರ್‌ ಪಡೆಯುವ ಅವಕಾಶವನ್ನು ನೀಡಲಾಗಿದೆ ಎಂದು ಭಾರತೀಯ ತೈಲ ಕಾರ್ಪೋರೇಷನ್ ತಿಳಿಸಿದೆ.

Related posts

ಪೆಟ್ರೋಲ್ ಬಂಕ್ ನಿಂದ ಹಣ ಕದ್ದು 14 ವರ್ಷಗಳ ಕಾಲ ಗುಹೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ,ಕೊನೆಗೂ ಸೆರೆಯಾಗಿದ್ದು ಹೇಗೆ?

ಮುಸ್ಲಿಂ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ತಲೆ ಬೋಳಿಸಿದ ಕಿರಾತಕರು,ಜೈ ಶ್ರೀರಾಮ್ ಹೇಳುವಂತೆ ಬಲವಂತ!,ವೈರಲ್ ವೀಡಿಯೋ ಇಲ್ಲಿದೆ ವೀಕ್ಷಿಸಿ..

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡದ್ದೇಕೆ ಸೈನಿಕ..? ಏನಿದು ಆಘಾತಕಾರಿ ಘಟನೆ..?