ಕ್ರೈಂ

ಗೆಳತಿಯನ್ನು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿ ಗೇಟಲ್ಲಿ ಸೆಕ್ಯೂರಿಟಿ ಕೈಗೆ ಸಿಕ್ಕಿಬಿದ್ದ ಪ್ರೇಮಿ..!

358
Spread the love

ಮಣಿಪಾಲ: ಗೆಳತಿಯನ್ನು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿ ಹಾಸ್ಟೆಲ್ ನ ಒಳಗೆ ಯುವಕನೊಬ್ಬ ಕರೆದುಕೊಂಡು ಹೋದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್ ನ ಸಿಸಿಟಿವಿ ದೃಶ್ಯಾವಳಿ ಈಗ ಎಲ್ಲೆಡೆ ವೈರಲ್ ಆಗಿದೆ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನನ್ನ ಗೆಳತಿಯನ್ನು ಹಾಸ್ಟೆಲ್ ಗೆ ದೊಡ್ಡ ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಚೆಕ್ ಮಾಡಿದ್ದಾರೆ. ಈ ಸಂದರ್ಭ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯುವಕ ಪ್ರಯತ್ನಿಸಿದ್ದಾನೆ. ಸಂಶಯ ಬಂದು ಸೂಟ್ ಕೇಸ್ ತೆಗೆದು ನೋಡಿದಾಗ ಯುವತಿ ಹೊರಗೆ ಬಂದಿದ್ದಾಳೆ. ಮಣಿಪಾಲ ಪೊಲೀಸರು ನಮಗೆ ಈ ವಿಚಾರ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಓಡಾಡುತ್ತಿದೆ. ವಿವಿ ಈ ಬಗ್ಗೆ ಮೌನವಾಗಿದೆ. ಆದರೆ ಸದ್ಯ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಡೆಹ್ರಾಡೋನ್ ನದ್ದೂ ಎಂದೂ ಹೇಳಲಾಗುತ್ತಿದೆ.

ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ

https://youtu.be/MA2tQ8l7KAo
See also  ಮಡಿಕೇರಿ: ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ, ಮಕ್ಕಳು ಅನಾಥ
  Ad Widget   Ad Widget   Ad Widget   Ad Widget   Ad Widget   Ad Widget