ವಿಡಿಯೋ

ಪ್ರೀತಿಸಿದ ಹುಡುಗಿಯ ತಾಯಿಗೆ ಕಿಡ್ನಿ ಕೊಟ್ಟ ಪ್ರೇಮಿ, ಒಂದೇ ತಿಂಗಳಲ್ಲಿ ಕೈ ಕೊಟ್ಟ ಯುವತಿ..!

700

ಮೆಕ್ಸಿಕೋ: ಪ್ರೀತಿ ಎಲ್ಲರೂ ಮಾಡುತ್ತಾರೆ. ಆದರೆ ಆ ಪ್ರೀತಿಯನ್ನು ಎಷ್ಟು ಜನ ಉಳಿಸಿಕೊಳ್ಳುತ್ತಾರೆ ಅನ್ನುವುದೇ ಮುಖ್ಯ. ಇಲ್ಲೊಬ್ಬ ಯುವಕ ತಾನು ಪ್ರೀತಿಸಿದ ಯುವತಿಯ ತಾಯಿಗೆ ತನ್ನ ಒಂದು ಕಿಡ್ನಿಯನ್ನೇ ನೀಡಿದ್ದಾನೆ. ಆದರೆ ಯುವತಿ ಮಾತ್ರ ಕನಿಷ್ಟ ಕೃತಜ್ಞತೆಯನ್ನೂ ಹೇಳದೆ ಒಂದೇ ತಿಂಗಳಲ್ಲಿ ಮತ್ತೊಬ್ಬ ಯುವಕನೊಂದಿಗೆ ಮದುವೆಯಾಗಿ ಬದುಕು ಕಟ್ಟಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆ ರಿಜೆಕ್ಟ್ ಮಾಡಿದ್ಯಾಕೆ ಅನ್ನುವ ಕಾರಣ ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.


ಮೆಕ್ಸಿಕೋದಲ್ಲಿ ಶಿಕ್ಷಕನಾಗಿರುವ ಉಜೀಲ್ ಮಾರ್ಟಿನೆಜ್ ಓರ್ವ ಯುವತಿಯನ್ನು ಪ್ರೀತಿ ಮಾಡಿದ್ದರು. ತಾನು ಪ್ರೀತಿ ಮಾಡಿದ ಹುಡುಗಿಯ ಖುಷಿಗಾಗಿ ಆಕೆಯ ಅನಾರೋಗ್ಯ ಪೀಡಿತ ತಾಯಿಗೆ ತಾವೇ ಒಂದು ಕಿಡ್ನಿಯನ್ನು ಕೂಡ ನೀಡಿದ್ದರು. ಆದರೆ, ಆ ಯುವತಿ ತನ್ನ ತಾಯಿಗೆ ಆಪರೇಷನ್ ಆದ ಒಂದೇ ತಿಂಗಳಲ್ಲಿ ಬೇರೊಬ್ಬ ಯುವಕನನ್ನು ಮದುವೆಯಾಗಿ ಉಜೀಲ್​ಗೆ ಕೈ ಕೊಟ್ಟಿದ್ದಾಳೆ. ತನ್ನ ಪ್ರೇಯಸಿಯ ತಾಯಿಗೆ ಕಿಡ್ನಿ ನೀಡಿದ್ದ ಆ ಯುವಕ ಇದೀಗ ಆತನಿಗೆ ಒಂದು ಕಿಡ್ನಿ ಇಲ್ಲ ಎಂಬ ಕಾರಣಕ್ಕೇ ಆಕೆಯಿಂದ ತಿರಸ್ಕರಿಸಲ್ಪಟ್ಟಿದ್ದಾನೆ! ತನ್ನ ದುರಂತ ಪ್ರೇಮಕತೆಯ ಬಗ್ಗೆ ಆತ ಸರಣಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿದ್ದಾನೆ. ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ನಿವಾಸಿಯಾಗಿರುವ ಉಜೀಲ್ ತನ್ನ ಮಾಜಿ ಪ್ರೇಯಸಿಯ ತಾಯಿಗೆ ತನ್ನ ಕಿಡ್ನಿಯನ್ನು ದಾನ ಮಾಡಿದ್ದ ಕತೆಯನ್ನು ವಿವರಿಸಿದ ವಿಡಿಯೋ ಈಗ ವೈರಲ್ ಆಗಿದೆ. ತನ್ನ ತಾಯಿಗಾಗಿ ಕಿಡ್ನಿ ಕೊಟ್ಟ ಅವನ ನಿಸ್ವಾರ್ಥ ಮನಸ್ಸನ್ನು ಮೆಚ್ಚುವ ಬದಲು ಆಕೆ ಆತನನ್ನು ತೊರೆದು ಬೇರೊಬ್ಬನನ್ನು ಮದುವೆಯಾಗಿರುವುದು ವಿಪರ್ಯಾಸವೇ ಸರಿ. ಜಗತ್ತಿನಲ್ಲಿ ಯಾವೊಬ್ಬ ಪ್ರೇಮಿಗೂ ಇಂತಹ ಮೋಸ ಆಗದಿರಲಿ ಎಂದು ಆಶಿಸೋಣ.

See also  "30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ, ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ..!" ಸರ್ಕಾರಿ ಕನ್ನಡ ಶಾಲೆ ಮುಖ್ಯ ಶಿಕ್ಷಕಿ ಮೇಲೆ ಗ್ರಾಮದೇವತೆ ಆವಾಹನೆ, ವಿಡಿಯೋ ವೈರಲ್
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget