ಕ್ರೈಂ

ಪ್ರೇಮ ವೈಫಲ್ಯ ಹಿನ್ನೆಲೆ, ಮಂಗಳೂರಿನ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ

ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೆಸರು ಶ್ರೀನಿವಾಸ್. ಆಂಧ್ರಪ್ರದೇಶ ಮೂಲದವನು. ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ. ಪಾಂಡೇಶ್ವರದಲ್ಲಿ ಲಾಡ್ಜ್ ಬುಕ್ ಮಾಡಿಕೊಂಡಿದ್ದ. ಈತ ಹಣ ನೀಡದ ಲಾಡ್ಜ್ ಕೀಯನ್ನೂ ನೀಡದೆ ಲಾಕ್ ಮಾಡಿಕೊಂಡು ಹೋಗಿದ್ದ. ಈ ಕಾರಣಕ್ಕೆ ಲಾಡ್ಜ್ ಮಾಲೀಕರು ಆತನನ್ನು ಹುಡುಕಾಟ ನಡೆಸಿದ್ದಾರೆ. ಆದರೆ ಆತ ಸಮೀಪದ ಮತ್ತೊಂದು ಲಾಡ್ಜ್ ನಲ್ಲಿ ಕೊಠಡಿ ಬುಕ್ ಮಾಡಿಕೊಂಡು ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

6 ಲಕ್ಷ ಮೊಬೈಲ್‌ ನಂಬರ್ ಬಂದ್, 65 ಸಾವಿರ ವೆಬ್ ಸೈಟ್ ಲಿಂಕ್ ಗಳು ಬ್ಲಾಕ್..! 8 ಲಕ್ಷ 50 ಸಾವಿರ ಮಂದಿಗೆ ಸೈಬರ್ ದಾಳಿಯಿಂದ ರಕ್ಷಣೆ..! ಏನಿದು ಪ್ರಕರಣ..?

ಕುಕ್ಕರ್ ಸ್ಪೋಟ, ಸ್ವಲ್ಪದರಲ್ಲೇ ಗೃಹಿಣಿ ಪ್ರಾಣಾಪಾಯದಿಂದ ಪಾರು

ಇನ್ಫೋಸಿಸ್‌ಗೆ 225 ಡಾಲರ್ ದಂಡ..! ಏನಿದು ತೆರಿಗೆ ವಂಚನೆ ಆರೋಪ..?