Latestಶಿಕ್ಷಣ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೂತನ 3D, 4k ರುಬಿನಾ ಕಾರ್ಲ್ ಸ್ಟೋರ್ಜ್ (ಜರ್ಮನಿ) ಲ್ಯಾಪರೊಸ್ಕೋಪಿ ಘಟಕದ ಸ್ಥಾಪನೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇದು ಪ್ರಥಮ ಘಟಕ ಎಂಬ ಹೆಗ್ಗಳಿಕೆ

1.3k

ನ್ಯೂಸ್ ನಾಟೌಟ್: ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಆಪರೇಷನ್ ಥಿಯೇಟರ್‌ ನಲ್ಲಿ 3D 4k ರುಬಿನಾ ಕಾರ್ಲ್ ಸ್ಟೋರ್ಜ್(Rubina Karl Storz Laparoscopy) (ಜರ್ಮನಿ) ಲ್ಯಾಪರೊಸ್ಕೋಪಿ ಘಟಕವನ್ನು ಸ್ಥಾಪಿಸಲಾಯಿತು.

ಜೂ.19 ರಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ರಾದ ಡಾ ಕೆ. ವಿ ಚಿದಾನಂದ ಇದನ್ನು ಅನಾವರಣಗೊಳಿಸಿದರು.

ಇದು ಲ್ಯಾಪರೊಸ್ಕೋಪಿ ಮೂಲಕ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಯಂತ್ರವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿಯೇ ಮೊದಲೆನೆಯದ್ದು ಎನ್ನುವ ಹೆಗ್ಗಳಿಕೆಗೆ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪಾತ್ರವಾಗಿದೆ.

ಈ ಸಂದರ್ಭ AOLE(R.) ಉಪಾಧ್ಯಕ್ಷರಾದ ಶೋಭಾ ಚಿದಾನಂದ, ಕೋಶಾಧಿಕಾರಿ ಡಾ ಗೌತಮ್ ಗೌಡ, ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ರಾಮಚಂದ್ರ ಭಟ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ ಗೀತಾ ದೊಪ್ಪಾ, ಪೆಲ್ವಿಕ್ ಲ್ಯಾಪರೊಸ್ಕೋಪಿಕ್ ಸರ್ಜನ್ ಪ್ರೊ. ಡಾ ರವಿಕಾಂತ್ ಜಿ. ಒ, ಡಾ ಸುಬ್ರಮಣ್ಯ, ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

 

See also  ಚೀಟಿ ಹಣದ ವಿಚಾರಕ್ಕೆ ಗಲಾಟೆಯಾಗಿ ದೊಣ್ಣೆಯಿಂದ ಹೊಡೆದು ಯುವಕನ ಹತ್ಯೆ..! ಬಿಡಿಸಲು ಬಂದವರಿಗೂ ಕಚ್ಚಿದ ಆರೋಪಿ..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget