ನ್ಯೂಸ್ ನಾಟೌಟ್ :ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕುರುಂಜಿಭಾಗ್, ಸುಳ್ಯ ಉಚಿತ ಆರೋಗ್ಯ ಮೇಳವನ್ನು 24 ಜೂನ್ 2025ರಿಂದ 04 ಜುಲೈ 2025ರವರೆಗೆ ಹಮ್ಮಿಕೊಳ್ಳಲಾಗಿದೆ.
ಅರೋಗ್ಯ ಮೇಳದಲ್ಲಿ ರೋಗಿಗಳನ್ನು ತಜ್ಞ ಹಾಗೂ ನುರಿತ ವೈದ್ಯರುಗಳಿಂದ ತಪಾಸಣೆ ಮಾಡಿ ನಿಗದಿತ ಚಿಕಿತ್ಸೆಗಳನ್ನು ಉಚಿತ ಹಾಗೂ ರಿಯಾಯಿತಿ ದರದಲ್ಲಿ ಈ ಕೆಳಗಿನ ವಿಭಾಗಗಳಲ್ಲಿ ಮಾಡಲಾಗುವುದು.
1. ಜನರಲ್ ಮೆಡಿಸಿನ್, 2. ಶಸ್ತ್ರ ಚಿಕಿತ್ಸೆ ವಿಭಾಗ, 3. ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗ, 4. ಎಲುಬು ಮತ್ತು ಕೀಲು ರೋಗ ವಿಭಾಗ, 5. ಕಿವಿ, ಮೂಗು ಮತ್ತು ಗಂಟಲು ವಿಭಾಗ, 6. ಮಕ್ಕಳ ವಿಭಾಗ, 7. ನೇತ್ರ ಚಿಕಿತ್ಸಾ ವಿಭಾಗ, 8. ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, 9. ಮನೋರೋಗ ವಿಭಾಗ, 10 ಶ್ವಾಸಕೋಶ ವಿಭಾಗ.
ಈ ವಿಭಾಗಗಳಲ್ಲಿ ಚಿಕಿತ್ಸೆಗಳನ್ನು ಹೊರ ಹಾಗೂ ಜನರಲ್ ವಾರ್ಡಿನ ಒಳ ರೋಗಿಗಳಿಗೆ ಆರೋಗ್ಯ ಮೇಳದ ನಿಬಂಧನೆಯಂತೆ ಕೊಡಲಾಗುವುದು. ಜನರಲ್ ವಾರ್ಡಿನಲ್ಲಿ ಕನಿಷ್ಠ 5 ದಿವಸ ಮತ್ತು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ದಿನದ ಚಿಕಿತ್ಸೆಗಳನ್ನು ಕೊಡಲಾಗುವುದು. ನೋಂದಾವಣೆ ಸಮಯದಲ್ಲಿ ಆಧಾರ್ ಕಾರ್ಡ್ ಕಡಾಯವಾಗಿರುತ್ತದೆ.
ಈ ಮೇಲಿನ ಎಲ್ಲಾ ಸೌಲಭ್ಯಗಳ ಪ್ರಯೋಜನಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08257-230316, 7353752223, 9108235183