ನ್ಯೂಸ್ ನಾಟೌಟ್ : ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇವರು ಮಾರ್ಚ್ -2025ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ/ಎಂ.ಎಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತ್ತರ ವಿಭಾಗದ ಮೂವರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ರ‍್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಗದ ತಂತ್ರ ವಿಭಾಗ ಮುಖ್ಯಸ್ಥ ಡಾ. ಅವಿನಾಶ್ ಕೆ.ವಿ ಅವರ ಮಾರ್ಗದರ್ಶನದಲ್ಲಿ ಡಾ. ಧನ್ಯಶ್ರೀ ಯು.ಬಿ. ಹಾಗೂ ಡಾ. ಪ್ರಿಯ ಪಿ., ಅಗದ ತಂತ್ರ ವಿಭಾಗದಲ್ಲಿ ಮೂರನೇ ರ‍್ಯಾಂಕ್ನ್ನು
ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ. ಜಿ., ರವರ ಮಾರ್ಗದರ್ಶನ ದಲ್ಲಿ ಡಾ. ಚೇತನ ಶಣ್ಮುಗಪ್ಪ ಮುಗಳಿ, ಪಂಚಕರ್ಮ ವಿಭಾಗದಲ್ಲಿ ಒಂಭತ್ತನೇ ರ‍್ಯಾಂಕ್ ನ್ನು ಪಡೆದಿರುತ್ತಾರೆ.
ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿಜಿಸ್ಟರ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ., ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಕೆ.ವಿ. ಹೇಮನಾಥ್, ಖಜಾಂಚಿ ಡಾ. ಗೌತಮ್ ಗೌಡ ಹಾಗೂ ಕೌನ್ಸಿಲ್ ಮೆಂಬರ್ಸ್ ಗಳು ಮತ್ತು ಸಂಸ್ಥೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಅಭಿನಂದಿಸಿದ್ದಾರೆ.