ಭಕ್ತಿಭಾವ

ಕುಕ್ಕೆ ಸುಬ್ರಹ್ಮಣ್ಯ; ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಾಭಾವಿ ಸಭೆ

786

ಸುಬ್ರಹ್ಮಣ್ಯ: ಜಾತ್ರಾ  ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಭಕ್ತರ ಸಹಕಾರ ಅತ್ಯಗತ್ಯ. ಸೂಕ್ತ ಯೋಜಿತ ಚಿಂತನೆ ಮೂಲಕ ಶ್ರೀ ದೇವತಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಭಕ್ತರು ಮತ್ತು ಇಲಾಖಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು. ಜಾತ್ರಾ ಸಮಯದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿಶೇಷ  ಮುತುವರ್ಜಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಈ ಹಿಂದಿನAತೆ   ಯಾವುದೇ ಗೊಂದಲವಿಲ್ಲದೆ ಜಾತ್ರೆ ನೆರವೇರಲು ಸರ್ವರೂ ಸಹಕರಿಸಬೇಕು. ಕೋವಿಡ್ ೧೯ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಜಾತ್ರೋತ್ಸವವು ಸಾಂಗವಾಗಿ ನೆರವೇರಲು ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದರು.

ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಶ್ರೀ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ದೇವಳದ ಮೇಲ್ಮಹಡಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಅಧಿಕ ಭಕ್ತ ವೃಂದಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಸೃಷ್ಠಿಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ. ಆದುದರಿಂದ ಜಾತ್ರೋತ್ಸವದ ಸುಸಂಪನ್ನತೆ ವಿನೂತನ ಯೋಜನೆಗಳ ಮೂಲಕ ಕಾರ್ಯಪ್ರವೃತ್ತರಾಗೋಣ ಎಂದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ ಮಾತನಾಡಿ,  ಸಂಪ್ರದಾಯಕ್ಕೆ ಅನುಗುಣವಾಗಿ ಮತ್ತು ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಿಕೊಂಡು ಜಾತ್ರೋತ್ಸವವು ನಡೆಯಲಿದೆ. ಈ ಹಿಂದಿನಂತೆ ಭಕ್ತರಿಗೆ ಬೇಕಾದ ಸುಸಜ್ಜಿತ ಅನುಕೂಲತೆಗಳನ್ನು ಮಾಡಿಕೊಂಡು ಜಾತ್ರೋತ್ಸವ ನೆರವೇರಲಿದೆ. ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಜಾತ್ರೋತ್ಸವದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಚಂಪಾಷಷ್ಠಿ ಮಹೋತ್ಸವ ಸಾಂಗವಾಗಿ ನೆರವೇರಲು ಸಹಕರಿಸಬೇಕು ಎಂದರು.

See also  ಮೂಲ್ಕಿ:ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವರ ಉತ್ಸವ ವೇಳೆ ರಥದ ಮೇಲ್ಭಾಗ ಕುಸಿತ!!ಆಗಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget