ಕರಾವಳಿ

ಕೊಯಿನಾಡು ನಾಟಿ ವೈದ್ಯೆ ಪದ್ಮಾವತಿ ಇನ್ನಿಲ್ಲ, ಕಳಚಿದ ನಾಟಿ ವೈದ್ಯಕೀಯ ಕ್ಷೇತ್ರದ ಕೊನೆಯ ಕೊಂಡಿ

1.1k

ಸುಳ್ಯ: ಕೊಯಿನಾಡು ಪದ್ಮಾವತಿ ಆಚಾರ್ಯ ಅವರು ಇಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಕೊಯಿನಾಡು ಮದ್ದಿನ ಅಜ್ಜಿ ಎಂದೇ ಪ್ರಸಿದ್ದಿ ಪಡೆದ ಇವರು ಅನೇಕ ಜನರ ಬಾಳಲ್ಲಿ ಸಂಜೀವಿನಿಯಾಗಿದ್ದರು. ಕಷ್ಟ ಎಂದು ಬಂದವರಿಗೆ ಹಳ್ಳಿ ಮದ್ದು ಕೊಟ್ಟು ನೆರವಾಗುತ್ತಿದ್ದರು. ನಾಡಿನ ನಾನಾ ಕಡೆಗಳಿಂದ ಬಂದು ನಾಟಿ ವೈದ್ಯೆಯನ್ನು ಭೇಟಿಯಾಗಿ ಔಷಧಿ ಪಡೆದುಕೊಳ್ಳುತ್ತಿದ್ದರು. ಪುತ್ರ ಜಗದೀಶ್ ಆಚಾರ್ಯ, ಪುತ್ರಿಯರಾದ ಶಾರದಾ ಆಚಾರ್ಯ, ಬೇಬಿ ಆಚಾರ್ಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಏನಾಗಿತ್ತು?

ಜ್ವರದಿಂದ ಬಳಲುತ್ತಿದ್ದ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲಿಂದ ವೈದ್ಯರ ಸೂಚನೆ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಾವತಿಯವರು ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

See also  'ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ನಾಟಕ ಬಟಾ ಬಯಲಾಗಿದೆ' ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ವಾಗ್ದಾಳಿ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget