ಪುತ್ತೂರು

ಕೊರಗಜ್ಜನ ಅಸಮಂಜಸ ವಿಡಿಯೋ ಮಾಡಿ ದುಷ್ಕರ್ಮಿಗಳಿಂದ ಅಪಚಾರ, ಕಿಡಿಗೇಡಿಗಳನ್ನು ಬಂಧಿಸುವಂತೆ ಹಿಂದೂ ಜಾಗರಣ ವೇದಿಕೆ ದೂರು

1k

ಬಜಪೆ : ತುಳುನಾಡಿನ ಆರಾಧ್ಯ ಕಾರಣಿಕ ದೈವ ಕೊರಗಜ್ಜನ ವಿಡಿಯೋವನ್ನು ಅಸಮಂಜಸವಾಗಿ  ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಯನ್ನು  ತಕ್ಷಣ  ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ರಮೇಶ ಮಟ್ಟಿ ಬಜಪೆ ಠಾಣೆಗೆ ದೂರು ನೀಡಿದ್ದಾರೆ. ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತ ಭರತ್ ಎಸ್  ಕರ್ಕೆರ,  ತಾಲೂಕು ಕಾರ್ಯದರ್ಶಿ ಸಜೇಶ್ ಕುಮಾರ್ , ಸಂದೀಪ್, ನವೀನ್ ಹಾಗೂ ಇತರರು ಉಪಸ್ಥಿತರಿದ್ದರು. ದೂರು ಸ್ವೀಕರಿಸಿದ ಬಜಪೆ ಠಾಣೆಯ ವೃತ್ತ ನಿರೀಕ್ಷಕರು ಆರೋಪಿಯನ್ನು ತಕ್ಷಣ ಬಂಧಿಸುವ ಭರವಸೆ ನೀಡಿದ್ದಾರೆ.

See also  ಹೊಸಂಗಡಿ: ಸಾರ್ವಜನಿಕ ಸೇವೆಗೆ ಆಂಬ್ಯುಲೆನ್ಸ್ ಲೋಕಾರ್ಪಣೆ, ಭೀಮ್ ಆರ್ಮಿ ಸಂಘಟನೆಯಿಂದ ಜನ ಸೇವೆಯೇ ಜನಾರ್ದನನ ಸೇವೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget