ಕೊಡಗು

ಕೊಡಗಿನಲ್ಲೂ ಕೊರಗಜ್ಜನ ಪವಾಡ: ಮದ್ಯ ಕದ್ದವನ ಸ್ಥಿತಿ ಏನಾಯಿತು ಗೊತ್ತಾ?

882

ಮಡಿಕೇರಿ: ಕರಾವಳಿಯ ಪವರ್ ಫುಲ್‌ ದೈವ ಎಂದೇ ಖ್ಯಾತಿ ಪಡೆದಿರುವ ಸ್ವಾಮಿ ಕೊರಗಜ್ಜನ ಪವಾಡಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಇದೀಗ ನೆರೆಯ ಜಿಲ್ಲೆ ಕೊಡಗಿನಲ್ಲೂ ಕೊರಗಜ್ಜ ತನ್ನ ಸತ್ಯ ದರ್ಶನವನ್ನು ಮಾಡಿ ವಿಸ್ಮಯ ಮೂಡಿಸಿದ್ದಾನೆ.

ಏನಿದು ಪವಾಡ?

ಸುಂಟಿಕೊಪ್ಪದ ಕೆದಕಲ್ ಎಂಬಲ್ಲಿ ಕೊರಗಜ್ಜನ ಕಟ್ಟೆ ಇದೆ. ಇಲ್ಲಿ ನಿಯಮಾನುಸಾರ ಕಾಲಕಾಲಕ್ಕೆ ಪೂಜೆ ಕೂಡ ನಡೆಯುತ್ತದೆ. ಸಾಮಾನ್ಯವಾಗಿ ಕೊರಗಜ್ಜನ ದೇವಸ್ಥಾನಕ್ಕೆ ಅಮೃತ (ಮದ್ಯ)ವನ್ನು ಹರಕೆಯ ರೂಪದಲ್ಲಿ ನೀಡುವುದು ವಾಡಿಕೆ. ಅಂತೆಯೇ ಇತ್ತೀಚೆಗೆ ಪೂಜೆ ನಡೆದಾಗಲೂ ಮದ್ಯವನ್ನು ಕೊರಗಜ್ಜನಿಗೆ ಸಮರ್ಪಿಸಲಾಗಿತ್ತು. ಆದರೆ ವ್ಯಕ್ತಿಯೊಬ್ಬ ಅದನ್ನು ಕದ್ದಿದ್ದಾನೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿತ್ತು. ದೇವರಿಗೆ ಕೈ ಮುಗಿಯುವ ರೂಪದಲ್ಲಿ ಬಂದ ಅವನು ಎರಡು ಪ್ಯಾಕೆಟ್‌ ಮದ್ಯವನ್ನು ಎತ್ತಿಕೊಂಡು ಹೋಗಿದ್ದ. ಮಾಸ್ಕ್ ಧರಿಸಿದ್ದರಿಂದ ಯಾರೆಂದೂ ಗೊತ್ತಾಗಿರಲಿಲ್ಲ. ಕೆಲವು ದಿನಗಳ ನಂತರ ಮದ್ಯ ಕದ್ದ ವ್ಯಕ್ತಿಯ ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಕಂಡು ಬಂದಿದ್ದು ಆತನಿಗೆ ಕಣ್ಣು ತೆರೆಯಲೂ ಸಾಧ್ಯವಾಗುತ್ತಿರಲಿಲ್ಲ. ಇದೀಗ ಆತ ದೇವಸ್ಥಾನಕ್ಕೆ ಬಂದು ತಪ್ಪು ಒಪ್ಪಿಕೊಂಡಿದ್ದಾನೆ. ಈಗ ಆತ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

See also  ಇಂದು ಮಧ್ಯರಾತ್ರಿಯಿಂದ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget