ಜಾಲತಾಣದಲ್ಲಿ ನ್ಯೂಸ್‌ ನಾಟೌಟ್ ಪ್ರಕಟಿಸಿದ್ದ ಕಲ್ಲುಗುಂಡಿಯ ಕೊರಗಜ್ಜನ ಭಕ್ತೆಯ ವಿಡಿಯೋ ವೈರಲ್

4

ಕಲ್ಲುಗುಂಡಿ: ಸುದೀರ್ಘ ಕಾಲದಿಂದ ಕೊರಗಜ್ಜನ ಆರಾಧನೆ ಮಾಡಿಕೊಂಡು ಬಂದಿರುವ ಕಲ್ಲುಗುಂಡಿಯ ಭಕ್ತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಠಾತ್‌ ವೈರಲ್ ಆಗಿದ್ದಾರೆ. ಇತ್ತೀಚೆಗೆ ನ್ಯೂಸ್‌ ನಾಟೌಟ್ ತಂಡ 70 ವರ್ಷದ ಅಜ್ಜಿ ದೇವಕಿ ಕೈಪಡ್ಕ ಎಂಬುವವರನ್ನು ವಿಶೇಷ ಸಂದರ್ಶನ ನಡೆಸಿತ್ತು. ಈ ವೇಳೆ ಅಜ್ಜಿ ಕೊರಗಜ್ಜನ ಕಥೆ ಹಾಗೂ ಕೊರಗ ತನಿಯನ ಪಾರ್ದನವನ್ನು ಹೇಳಿದ್ದರು. ಈ ವಿಡಿಯೋ ನ್ಯೂಸ್‌ ನಾಟೌಟ್ ಯು ಟ್ಯೂಬ್ ಚಾನಲ್‌ನಲ್ಲಿ ಹಾಗೂ ಫೇಸ್ ಬುಕ್‌ನಲ್ಲಿ ಪ್ರಕಟವಾಗಿತ್ತು. ಸಾವಿರಾರು ಜನರು ಇದನ್ನು ವೀಕ್ಷಿಸಿ ಅಜ್ಜಿಯ ಮುಗ್ದ ಭಕ್ತಿಯನ್ನು ಕೊಂಡಾಡಿದ್ದರು. ಫೇಸ್‌ ಬುಕ್‌ ಒಂದರಲ್ಲೇ ಹತ್ತು ಸಾವಿರಕ್ಕೂ ಅಧಿಕ ಮಂದಿ ಹಾಗೂ ಯುಟ್ಯೂಬ್ ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದರು. ನ್ಯೂಸ್‌ ನಾಟೌಟ್ ತಂಡ ಕ್ಷಿಪ್ರ ಗತಿಯಲ್ಲಿ ಜನರನ್ನು ತಲುಪುತ್ತಿದೆ. ಡಿಜಿಟಲ್‌ ಮಾಧ್ಯಮಗಳ ಪೈಕಿ ಅತ್ಯಂತ ವೇಗವಾಗಿ ಮಾಹಿತಿ ರವಾನಿಸುತ್ತಿದೆ. ಎಲ್ಲ ನಮ್ಮ ವೆಬ್‌ ಸೈಟ್‌ ಓದುಗರಿಗೆ ಹಾಗೂ ಯು ಟ್ಯೂಬ್‌ ವೀಕ್ಷಕರಿಗೆ ನ್ಯೂಸ್‌ ನಾಟೌಟ್ ತಂಡದ ಹೃದಯ ಪೂರ್ವಕ ಧನ್ಯವಾದಗಳು. ವಿಡಿಯೋ ಇಲ್ಲಿದೆ ನೋಡಿ: https://youtu.be/Zhs0PXhuxx4

https://youtu.be/Zhs0PXhuxx4

Related Articles

ಕ್ರೈಂಸುಳ್ಯ

ಕನಕಮಜಲಿನ ಮಿತ್ತಮಜಲಿನ ಬಳಿ ಬರೆಗೆ ಗುದ್ದಿದ ಕಾರು..! ಪ್ರಯಾಣಿಕರು ಆಸ್ಪತ್ರೆಗೆ ದಾಖಲು

ನ್ಯೂಸ್‌ ನಾಟೌಟ್: ಕನಕಮಜಲಿನ ಮಿತ್ತಮಜಲಿನ ಬಳಿ ಬರೆಗೆ ಕಾರು ಗುದ್ದಿದ ಘಟನೆ ಇಂದು(ಫೆ.11) ನಡೆದಿದೆ. ಕಾರಿನಲ್ಲಿದ್ದ...

ಸುಳ್ಯ

ಸುಳ್ಯ: ಅಲ್ ಇಹ್ಸಾನ್ ಸಂಸ್ಥೆಯಿಂದ ಅತಿ ಕಡಿಮೆ ದರದಲ್ಲಿ ಉಮ್ರಾ ಪ್ಯಾಕೇಜ್‌

ನ್ಯೂಸ್‌ ನಾಟೌಟ್: ಸುಳ್ಯದ ಗಾಂಧಿನಗರದಲ್ಲಿರುವ ಅಲ್ ಇಹ್ಸಾನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ಅತಿ ಕಡಿಮೆ...

@2025 – News Not Out. All Rights Reserved. Designed and Developed by

Whirl Designs Logo