ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ‘ಕೂ’ ಕ್ರಿಕೆಟ್ ಗೀತೆ

4

ಬೆಂಗಳೂರು: ಟಿ20 ವಿಶ್ವಕಪ್ ಕ್ರಿಕೆಟ್ ನ ಕ್ರೇಜ್ ಈಗಾಗಲೇ ಎಲ್ಲೆಡೆ ಮನೆಮಾಡಿದೆ. ಇದನ್ನು ಹೆಚ್ಚಿಸಲು ಕೂ ಆಪ್ ‘ಕೂ ಪೆ ಬೊಲೆಗಾ’ ಎಂಬ ಆಕರ್ಷಕ ಗೀತೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಟಿ-20 ವಿಶ್ವಕಪ್ 2021 ರ ಸರಣಿಯ ಈ ಸಮಯದಲ್ಲಿ ಟೀಮ್ ಇಂಡಿಯಾವನ್ನು  ಹುರಿದುಂಬಿಸುವ ಅಭಿಮಾನಿಗಳ ಉತ್ಸಾಹವನ್ನು ಈ ಗೀತೆ ಪ್ರತಿಧ್ವನಿಸುತ್ತದೆ.

ಜನಪ್ರಿಯ ಗಾಯಕ ಬೆನ್ನಿ ದಯಾಳ್ ಸಂಗೀತ ಸಂಯೋಜಿಸಿ ಹಾಡಿರುವ ಆಕರ್ಷಕ ಗೀತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಸೆಳೆದಿದೆ. ಗೀತೆ ಬಿಡುಗಡೆಗೊಂಡಾಗಿನಿಂದ ಬೆನ್ನಿ ದಯಾಳ್ ಅವರ ಫಾಲೋವರ್ಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಬೆನ್ನಿ ದಯಾಳ್ ಅವರು 16 ಭಾಷೆಗಳಲ್ಲಿ 2000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ ಮತ್ತು ಕೂಗಾಗಿ ಈ ಗೀತೆಯು ಭಾರತೀಯ ಭಾಷೆಗಳಾದ್ಯಂತ ಬಳಕೆದಾರರ ಪ್ರತಿಕ್ರಿಯೆಗಳೊಂದಿಗೆ ಪ್ರತಿಧ್ವನಿಸುತ್ತಿದೆ.

Related Articles

ಕ್ರೀಡೆ/ಸಿನಿಮಾ

ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿಗೆ ಶೀಘ್ರದಲ್ಲೇ ಮದುವೆ?!43ನೇ ವಯಸ್ಸಿಗೆ ಹಸೆಮಣೆ ಏರಲು ಸಜ್ಜಾದ ಬಾಹುಬಲಿ ‘ದೇವಸೇನ’

ನ್ಯೂಸ್‌ ನಾಟೌಟ್‌: ಮಂಗಳೂರು ಬೆಡಗಿ ಬಾಹುಬಲಿ’ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡ ಅನುಷ್ಕಾ ಶೆಟ್ಟಿಗೆ ಇದೀಗ...

@2025 – News Not Out. All Rights Reserved. Designed and Developed by

Whirl Designs Logo