ಕರಾವಳಿ

ಕೊಕ್ಕಡದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

608

ನ್ಯೂಸ್ ನಾಟೌಟ್: ಕೊಕ್ಕಡದ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಕರೆದೊಯ್ದ ತಂಡವೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕೊಕ್ಕಡ ನಿವಾಸಿ ಸಮೀರ್ ಎಂದು ಗುರುತಿಸಲಾಗಿದೆ. ಸದ್ಯ ಗಂಭೀರ ಗಾಯಗೊಂಡಿರುವ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂ.17 ಶುಕ್ರವಾರದಂದು ಸಂಜೆ ಬೋಳ ಪರಿಸರದ ಮೂರು ಮಂದಿ ತನ್ನನ್ನು ಕಾರಿನಲ್ಲಿ ಬರುವಂತೆ ಒತ್ತಾಯಿಸಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಮೊಬೈಲ್‌ ಫೋನ್ ಒಡೆದು ಹಾಕಿರುವುದಾಗಿ ಹಲ್ಲೆಗೊಳಗಾದ ಸಮೀರ್ ಆರೋಪಿಸಿದ್ದಾರೆ. ಸದ್ಯ ಯಾವ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ಕುರಿತಂತೆ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

See also  ಕೊರೊನಾ ಪತ್ತೆ ಮಾಡುತ್ತೆ ಈ ಮನೆ ಗೇಟ್:ಕೊರೊನಾ ರೋಗಿಗಳ ಸೇವೆ ಮಾಡುತ್ತೆ ರೋಬೋಟಿಕ್ ನರ್ಸ್..ಏನಿದು?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget