ಕ್ರೈಂ

ಬೆಳ್ತಂಗಡಿ-ಕೊಕ್ಕಡ: ಅಕ್ರಮ ಗೋಸಾಗಾಟ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

ಕೊಕ್ಕಡ: ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಕ್ರಮ ಗೋಸಾಗಾಟ ತಡೆದು ವಾಹನ ಸಹಿತ ಪೋಲಿಸರಿಗೊಪ್ಪಿಸಿದ ಘಟನೆ ಇಂದು ಮುಂಜಾನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಾಂಡಿಬೆಟ್ಟುನಿಂದ ಕೊಕ್ಕಡ ಸಮೀಪದ ಮಲ್ಲಿಗೆ ಮಜಲ್ ಗೆ ವಾಹನವೊಂದರಲ್ಲಿ ಎರಡು ಗೋವುಗಳ ಸಾಗಿಸುತ್ತಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ಲಭಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಕೊಕ್ಕಡ ಜಾಗರಣ ವೇದಿಕೆಯ ಕಾರ್ಯಕರ್ತರು ತಿಪ್ಪೆಮಜಲು ಎಂಬಲ್ಲಿ ವಾಹನವನ್ನು ತಡೆದಿದ್ದಾರೆ. ನಂತರ ಧರ್ಮಸ್ಥಳ ಠಾಣೆಯ ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದು, ಎರಡು ಗಂಟೆಗಳ ಬಳಿಕ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ‌

ಸದ್ಯ ಎರಡು ಗೋವು ಸಹಿತ ವಾಹನವನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ಈ ಭಾಗದಲ್ಲಿ ಅಕ್ರಮ ಗೋಸಾಗಾಟ ಪ್ರಕರಣಗಳು ನಡೆಯುತ್ತಲೇ ಇದ್ದು, ಪೋಲಿಸರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Related posts

ಮಂಗಳೂರು: ಮೂಡಾ ಹಗರಣದಲ್ಲಿ ಸಿಎಂ ಪರವಾಗಿ ಪ್ರತಿಭಟನೆ ವೇಳೆ ಹಿಂಸಾಚಾರ..! ಬಸ್ಸಿನ ಗಾಜು ಒಡೆದ ಮೂವರ ಬಂಧನ..!

ಉಪ್ಪಿನಂಗಡಿ:ಟಿಪ್ಪರ್ ಮತ್ತು ಬೈಕ್ ಅಪಘಾತ,ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಕೇರಳ: ದೇಗುಲ ಉತ್ಸವದ ವೇಳೆ ರೊಚ್ಚಿಗೆದ್ದ ಆನೆ..! ಸೊಂಡಿಲಿನಿಂದ ವ್ಯಕ್ತಿಯನ್ನು ಎಸೆದು ಆಕ್ರೋಶ, 20ಕ್ಕೂ ಹೆಚ್ಚು ಮಂದಿಗೆ ಗಾಯ, ಇಲ್ಲಿದೆ ವಿಡಿಯೋ