ಮಡಿಕೇರಿ: ವೀರ ಯೋಧರ ನೆಲೆಬೀಡು ಕೊಡಗಿನ ಜನತೆ ಮತ್ತೊಮ್ಮೆ ಹೆಮ್ಮೆ ಪಡುವಂತಾಗಿದೆ. ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಸೈನ್ಯಾಧಿಕಾರಿ ಕೋದಂಡ ಪಿ.ಕಾರ್ಯಪ್ಪ ಇದೀಗ ರಜಪೂತ್ ರೈಫಲ್ಸ್ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ನಿರ್ಗಮಿತ ಅಧಿಕಾರಿ ಕೆಜೆಎಸ್ ದಿಲ್ಲೋನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಕಾರ್ಯಪ್ಪ ಅವರು ಈಗಾಗಲೇ ಭಾರತೀಯ ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.