ಕರಾವಳಿಕ್ರೀಡೆ/ಸಿನಿಮಾಜೀವನಶೈಲಿನಮ್ಮ ತುಳುವೇರ್ಮಂಗಳೂರುರಾಜ್ಯವಿಡಿಯೋವೈರಲ್ ನ್ಯೂಸ್

ತುಳುನಾಡು ಕರ್ನಾಟಕದಲ್ಲೇ ಇದೆ,ನಮ್ಮನ್ನು ಹೊರಗಿನವರನ್ನಾಗಿ ಮಾಡಬೇಡಿ ಎಂದ ಕಿಚ್ಚ ಸುದೀಪ್..! ಇಲ್ಲಿದೆ ವಿಡಿಯೋ

73
Spread the love

ನ್ಯೂಸ್ ನಾಟೌಟ್: ಕಿಚ್ಚ ಸುದೀಪ್ (Kichcha Sudeep) ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದರು. ಗೆಳೆಯನ ರೆಸ್ಟೋರೆಂಟ್​ನ ಉದ್ಘಾಟನೆ ಮಾಡಿ ಮಾತನಾಡಿದ ಕಿಚ್ಚ, ‘ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ. ಕರ್ನಾಟಕ ನಮ್ಮ ಹೃದಯದಲ್ಲಿದೆ. ನಾವು ಅರ್ಧ ಈಕಡೆಯವರು ಎಂದು ನಿರೂಪಕರು ಹೇಳಿದರು. ನಮ್ಮ ತಂದೆಗೆ ಇಡೀ ಕರ್ನಾಟಕದಲ್ಲಿ ಮಂಗಳೂರಿನ ಹುಡುಗಿ ಇಷ್ಟ ಆಯ್ತು’ ಎಂದರು ಸುದೀಪ್. ಅವರ ತಾಯಿ ಮಂಗಳೂರಿನವರು. ಹೀಗಾಗಿ, ಅವರಿಗೆ ಮಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಆ ಊರಿನ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

‘ಪ್ರತಿ ಬಾರಿ ಇಲ್ಲಿಗೆ ಕರೆದಾಗ ಬಹಳ ಖುಷಿ ಆಗುತ್ತದೆ. ಈ ಊರಿನ ಬಗ್ಗೆ ಗೊತ್ತಿರೋದು ಎಂದರೆ ಅವರು ಸ್ವಾಭಿಮಾನಿಗಳು. ಬಹಳ ಸುಲಭವಾಗಿ ಯಾರನ್ನೂ ಇಷ್ಟಪಡಲ್ಲ. ಅಂಥಹುದರಲ್ಲಿ ಮನಸ್ಸಲ್ಲಿ ನನಗೆ ಸಣ್ಣ ಜಾಗ ಕೊಟ್ಟಿದ್ದೀರಿ. ಅದು ಪೀಠಕ್ಕಿಂತ ದೊಡ್ಡದು. ನಿಮ್ಮ ಗೌರವ ಸ್ವೀಕರಿಸಿಲ್ಲ ಎಂದುಕೊಳ್ಳಬೇಡಿ. ಅದನ್ನು ಸ್ವೀಕರಿಸಿದ್ರೆ ನಾನು ಅದಕ್ಕಾಗಿಯೇ ಬಂದೆ ಎಂದುಕೊಳ್ಳುತ್ತಾರೆ. ನಾನು ಬಂದಿದ್ದು ನನ್ನ ಸ್ನೇಹಿತರಿಗೆ’ ಎಂದರು ಸುದೀಪ್ ಹೇಳಿದ್ದಾರೆ. ‘ನನ್ನ ತಾಯಿ ತುಳು ಚೆನ್ನಾಗಿ ಮಾತಾಡ್ತಾರೆ. ನನಗೆ ಜಾಸ್ತಿ ತುಳು ಬರಲ್ಲ. ಕನ್ನಡ ಚಿತ್ರರಂಗಕ್ಕೆ ನಿಮ್ಮವರು ತುಂಬಾ ಜನ ಬಂದಿದ್ದಾರೆ. ಇದರಿಂದ ಕನ್ನಡ ಯಾವುದು, ತುಳು ಯಾವುದು ಅನ್ನೋದು ತಿಳಿಯುತ್ತಿಲ್ಲ’ ಎಂದು ಹಾಸ್ಯ ಮಾಡಿದರು. ತುಳು ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಬಂದು ಉತ್ತಮ ಸಿನಿಮಾ ನೀಡುತ್ತಿರುವವರ ಬಗ್ಗೆ ಮೆಚ್ಚುಗೆ ಸೂಚಿಸಿದರು.

See also  ಪತ್ನಿ, ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಕ್ಯಾಬ್ ಡ್ರೈವರ್..! ಇಡೀ ಕುಟುಂಬವೇ ದುರಂತ ಅಂತ್ಯ..!
  Ad Widget   Ad Widget   Ad Widget   Ad Widget