ಸುಳ್ಯ: ನಿಗಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಒಪ್ಪಂದವು, ಆಗಸ್ಟ್ 31ಕ್ಕೆ ಕೊನೆಗೊಂಡಿದ್ದು ತಕ್ಷಣ ನಿಗಮವು ಮಾತುಕತೆಗೆ ಕರೆಯುವಂತೆ ಕೆಎಫ್ ಡಿಸಿ ಕಾರ್ಮಿಕರು ಒತ್ತಾಯಿಸಿದ್ದಾರೆ. ದೀಪಾವಳಿ ಬೋನಸ್ 20 ಶೇಕಡ ನೀಡಬೇಕು ಹಾಗೂ ಇನ್ನಿತರ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ವಾರದೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಬಂದ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸದಸ್ಯ ಎಂ.ವೆಂಕಪ್ಪ ಗೌಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಬೆಂಬಲಿಸಿ ಮಾತನಾಡಿದರು. ಚಂದ್ರಲಿಂಗಂ, ಸುಬ್ಬಯ್ಯ, ದಯಾಳ್, ಸುಂದರಲಿಂಗಮ್, ತಂಗವೇಲು, ಕೃಷ್ಣವೇಣಿ, ಕಮಲ ನಾಗಪಟ್ಟಣ, ಹಾಗೂ ಇನ್ನಿತರ ಕಾರ್ಮಿಕ ನಾಯಕರು ಉಪಸ್ಥಿತರಿದ್ದರು.