ಸಾಧಕರ ವೇದಿಕೆ

ಬಂಪರ್ ಲಾಟರಿ: ಒಂದಲ್ಲ ಎರಡಲ್ಲ ಬರೋಬ್ಬರಿ 12 ಕೋಟಿ ರೂ. ಗೆದ್ದ ಪೇಂಟರ್..!

487

ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್ಮಸ್-ಹೊಸ ವರ್ಷದ ಲಾಟರಿಯ ಮೊದಲ ಬಹುಮಾನವಾದ 12 ಕೋಟಿ ರೂ. ಗೆದ್ದಿದ್ದಾರೆ.

ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರು ಕ್ರಿಸ್ಮಸ್ ನ್ಯೂ ಇಯರ್ ಬಂಪರ್ 12 ಕೋಟಿ ರೂ. ಲಾಟರಿ ಗೆದ್ದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇಂದು ಬೆಳಿಗ್ಗೆ ಮಾಂಸವನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಆಗ ಲಾಟರಿ ಮಾರಾಟಗಾರ ಸೆಲ್ವನ್ ನಿಂದ ಈ ಟಿಕೆಟ್ ಖರೀದಿಸಿದೆ. ಆದರೆ ಈಗ ಟಿಕೆಟ್ ಗೆ ಬಹುಮಾನ ಬಂದಿರುವುದು ಖುಷಿಯಾಗುತ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

See also  ಗುತ್ತಿಗಾರು:ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ "ಅಗ್ನಿ ರಕ್ಷಕ ಸೇವೆ"ಲೋಕಾರ್ಪಣೆ,ಯೋಗ ತರಬೇತಿ ಶಿಬಿರ ಸಮಾರಂಭ-ರಾಷ್ಟ್ರಮಟ್ಟದ ಪ್ರತಿಭೆಗಳಿಗೆ ಸನ್ಮಾನ
  Ad Widget   Ad Widget   Ad Widget   Ad Widget