ದೇಶ-ಪ್ರಪಂಚ

ಮೆಡಿಕಲ್ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಕೇರಳದ ಭಗ್ನ ಪ್ರೇಮಿ..!

ಕಣ್ಣೂರು : ಕೇರಳದ ಕೋತಮಂಗಲಂ ಬಳಿಯ ನೆಲ್ಲಿಕುಜಿ ಎಂಬಲ್ಲಿ ಯುವಕನೋರ್ವ ವೈದ್ಯಕೀಯ ವಿದ್ಯಾರ್ಥಿನಿಗೆ  ಗುಂಡು ಹಾರಿಸಿ  ತಾನು ಹಾರಿಸಿಕೊಂಡು  ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ರಾಖಿಲ್  (24)ಎಂಬ ಯುವಕ ಬಿಡಿಎಸ್   ವಿದ್ಯಾರ್ಥಿನಿ ಮಾನಸ  ಪಿ.ವಿ  ಎಂಬಾಕೆಗೆ  ಕೋವಿಯಿಂದ ಗುಂಡು ಹಾರಿಸಿ ಹತ್ಯೆ ಮಾಡಿ  ಬಳಿಕ ತಾನು ಕೋವಿಯಿಂದ  ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ಕೋತಮಂಗಲಂ ಇಂದಿರಾಗಾಂಧಿ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ  ದಂತ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಳು  ಎಂದು ತಿಳಿದು ಬಂದಿದೆ. ಮಾನಸನ  ಮನೆಯವರು ಕೆಲವು ಸಮಯದ ಹಿಂದೆ ರಾಖಿಲ್  ತಮ್ಮ ಮಗಳನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಕಿರುಕುಳ ಕೊಡುತ್ತಿದ್ದಾನೆ ಎಂದು ಕಣ್ಣೂರು ಪೊಲೀಸರಿಗೆ ದೂರು ನೀಡಿದ್ದರು. ಯುವಕ ಯುವತಿ  ಇಬ್ಬರು ಒಂದೇ ಊರಿನವರಾಗಿದ್ದು ಪ್ರೀತಿ ನಿರಾಕರಣೆ ಕಾರಣದಿಂದ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.

Related posts

ರಾಷ್ಟ್ರಪತಿ ಭಾಷಣದ ವೇಳೆ ವಿದ್ಯುತ್ ಕಡಿತ..! ಇಲ್ಲಿದೆ ವಿಡಿಯೋ

ಮಕರಜ್ಯೋತಿ ದರ್ಶನದಿಂದ ಪುನೀತರಾದ ಅಯ್ಯಪ್ಪ ಸ್ವಾಮಿ ಭಕ್ತರು,ಕಣ್ತುಂಬಿಕೊಂಡ ಭಕ್ತಕೋಟಿ

ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ತೆರಳಿದ್ದ ಟೈಟಾನ್ ನೌಕೆಯ ದುರಂತ ಹೇಗೆ ಸಂಭವಿಸಿತು?ಭಾರಿ ವೈರಲ್ಲಾದ ಆ್ಯನಿಮೇಶನ್ ವಿಡಿಯೋ ಇಲ್ಲಿದೆ ನೋಡಿ…