ನ್ಯೂಸ್ ನಾಟೌಟ್: ಹೊಗಳುವ ಭರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಜಬ್ಬಲ್ಪುರ ಹೈಕೋರ್ಟ್ ಎಫ್ ಐ ಆರ್ ದಾಖಲಿಸುವಂತೆ ಆದೇಶಿಸಿದೆ.
ತನ್ನ ಹೇಳಿಕೆ ವಿವಾದ ಆಗುತ್ತಿದ್ದಂತೆ ವಿಜಯ್ ಶಾ ಒಂದು ಬಾರಿಯಲ್ಲ 10 ಬಾರಿ ಕ್ಷಮೆ ಕೇಳಲು ಸಿದ್ಧ. ನನ್ನ ಹೇಳಿಕೆಯ ಪೈಕಿ ಕೆಲ ಸಾಲನ್ನು ಹಿಡಿದುಕೊಂಡು ತಿರುಚಿ ವಿವಾದ ಸೃಷ್ಟಿಸಿದ್ದಾರೆ ಎಂದು ದೂರಿದ್ದಾರೆ. ವಿಜಯ್ ಶಾ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವೂ ಖಂಡಿಸಿದೆ.
ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ ಅವರು ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಿಕ್ಕಿದ ಯಶಸ್ಸನ್ನು ಹೇಳಿ ಮೋದಿ ಸರ್ಕಾರವನ್ನು ಶ್ಲಾಘಿಸುತ್ತಿದ್ದರು.
भाषा की मर्यादा, शब्दों की गरिमा और सभ्यता की सारी सीमाएं लांघते हुए बेशर्म मंत्री विजय शाह ने घिनौना और शर्मनाक बयान दिया है।
• देश की शान, हमारी वीर बहादुर अफसर कर्नल सोफिया कुरैशी का अपमान पूरे भारत की नारी शक्ति का अपमान है।
• यदि भाजपा में थोड़ा सा भी देश प्रेम शेष हो और… pic.twitter.com/ZLT9JeXpM7
— MP Congress (@INCMP) May 13, 2025
ಭಾಷಣದಲ್ಲಿ, ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ಹೇಳಿದ್ದರು.
ಭಾಷಣದಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರನ್ನು ಸದೆ ಬಡಿಯಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರನ್ನು ಉಲ್ಲೇಖಿಸಿಯೇ ಭಾಷಣ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ದುಷ್ಟಶಕ್ತಿ ಓಡಿಸುತ್ತೇನೆಂದು ಮಹಿಳೆಗೆ 5 ಲಕ್ಷ ರೂ. ವಂಚಿಸಿದ ಜ್ಯೋತಿಷಿ..! ಹೋಟೆಲ್ ನಲ್ಲೇ ಪೂಜೆ, ಪ್ರಕರಣ ದಾಖಲು..!