Uncategorized

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಸಾಕಷ್ಟು ಹಣ ಮೀಸಲು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸುಳ್ಯ : ಕೃಷಿ ಕ್ಷೇತ್ರಗಳನ್ನು ಅಭಿವೃದ್ದಿ ಮಾಡಲು ಹಾಗೂ ಈ ಕ್ಷೇತ್ರಕ್ಕೆ ಮೂಲಭೂತ ವಸ್ತುಗಳನ್ನು ಖರೀದಿಸಲು ಸಾಕಷ್ಟು ಹಣವನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ .ಮುಂದಿನ ದಿನದಲ್ಲಿ ರೈತರ ಬದುಕು ಹಸನಾಗಲಿದೆ ಎಂದು ಕೇಂದ್ರ ಕೃಷಿ ಹಾಗೂ ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸುಳ್ಯ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಸುಳ್ಯ ಬಿಜೆಪಿ ಮಂಡಲ ಇದರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇವತ್ತು ಅಡಿಕೆ ಧಾರಣೆ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಇದಕ್ಕೆ ಕೇಂದ್ರ ಸರಕಾರ ಕಾರಣ. ಮುಂದಿನ ದಿನದಲ್ಲಿ‌ ಕೃಷಿ ಬೆಳೆಗಳಿಗೆ ಉತ್ತಮ ಧಾರಣೆ ದೊರೆಯಲು ಸರಕಾರ ಎಲ್ಲಾ ರೀತಿಯ ಪ್ರಯತ್ನ ಹಮ್ಮಿಕೊಂಡಿದೆ. ಮೋದಿ ನೇತೃತ್ವ ಸರಕಾರ ಉತ್ತಮ ಆಡಳಿತ ನಡೆಸುತ್ತಿದೆ. ಪ್ರಧಾನಿಯವರು ದಿನದ 18 ಗಂಟೆಯು ದೇಶಕ್ಕಾಗಿ ದುಡಿಯುತ್ತಿದ್ದಾರೆ. .ಇವರ ಎದೆಗಾರಿಕೆಗೆ ಶತ್ರು ದೇಶಗಳು ಕೂಡ ಇಂದು ಕೈಕಟ್ಟಿ ಕುಳಿತಿವೆ ಎಂದು ಹೇಳಿದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಬಿಜೆಪಿ ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಎ.ವಿ ತೀರ್ಥರಾಮ, ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಕಾರ್ಯಕಾರಣಿ ಸಮಿತಿ ಸದಸ್ಯೆ ಭಾಗೀರಥಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಂಬೆ ,ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ಬಿಜೆಪಿ ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಗುರುದತ್ತ್ ನಾಯಕ್, ಬಿಜೆಪಿ ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ರಾಧಾಕ್ರಷ್ಣ ಬೊಳ್ಳುರು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ,ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.

Related posts

ಆರೋಗ್ಯ ಕೇಂದ್ರಕ್ಕೆ ಬಾರದ ವೈದ್ಯರು, ನರ್ಸ್‌: 2 ತಾಸು ನರಳಾಡಿದ ತುಂಬು ಗರ್ಭಿಣಿ

ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ವರುಣನ ಆರ್ಭಟ..!ಮೂವರು ದುರಂತ ಅಂತ್ಯ,ಸಾವಿರಾರು ಮಂದಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ

ಮುಂಬೈ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ..! 9 ಮಂದಿಗೆ ತೀವ್ರ ಗಾಯ..! ಇಲ್ಲಿದೆ ವಿಡಿಯೋ