Latestವಿಡಿಯೋವೈರಲ್ ನ್ಯೂಸ್

ಕೊಳಚೆ ಚರಂಡಿಗೆ ಇಳಿದು ಅಲ್ಲಿ ಸಿಲುಕಿ ಒದ್ದಾಡುತ್ತಿದ್ದ ಗೋವನ್ನು ರಕ್ಷಿಸಿದ ಹೃದಯವಂತ..! ವಿಡಿಯೋ ವೈರಲ್

703
Spread the love

ನ್ಯೂಸ್ ನಾಟೌಟ್: ರಸ್ತೆ ಬದಿ ಒಂದು ಸಣ್ಣ ಕಸ ಬಿದ್ದಿದ್ರೂ ಅದು ನನ್ನ ಕೆಲಸ ಅಲ್ಲ ಎಂದು ಹೋಗುವವರ ಮಧ್ಯೆ ಕೆಲವರು ಮಾದರಿಯಾಗಿ ಕಾಣಸಿಗುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೊಳಚೆ ನೀರಿನಿಂದ ತುಂಬಿದ್ದ ಚರಂಡಿಗಿಳಿದು ಹಸುವನ್ನು ರಕ್ಷಣೆ ಮಾಡಿದ್ದಾನೆ.

ಚರಂಡಿಗೆ ಬಿದ್ದ ಹಸುವೊಂದು, ಮೇಲೆ ಬರಲಾಗದೆ ಪರದಾಡುತ್ತಿತ್ತು. ಈ ದೃಶ್ಯವನ್ನು ಕಂಡು ಈತ ಗಲೀಜು ಇದೆ ಎಂದು ತಲೆ ಕೆಡಿಸಿಕೊಳ್ಳದೆ ಚರಂಡಿಗಿಳಿದು ಗೋವನ್ನು ರಕ್ಷಿಸಿದ್ದಾನೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದು ಈ ವ್ಯಕ್ತಿಯ ಕಾರ್ಯವನ್ನು ಜನ ಮೆಚ್ಚಿಕೊಂಡಿದ್ದಾರೆ.

veera__singam ಹೆಸರಿನ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಚರಂಡಿಯಲ್ಲಿ ಸಿಲುಕಿದ್ದ ಹಸುವೊಂದು ಅಲ್ಲಿಂದ ಮೇಲೆ ಬರಲಾಗದೆ ಪರದಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಚರಂಡಿಗೆ ಇಳಿದ ವ್ಯಕ್ತಿಯೊಬ್ಬ ಬಹಳ ಪ್ರಯತ್ನಪಟ್ಟು ಹಸುವನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾನೆ. ಕೊನೆಗೆ ಹಗ್ಗದ ಸಹಾಯದಿಂದ ಆತ ಹಸುವನ್ನು ರಕ್ಷಿಸಿದ್ದಾನೆ.

ಇದನ್ನೂ ಓದಿಬೆಂಗಳೂರಲ್ಲಿ ಕುಡಿಯುವ ನೀರನ್ನು ಅನ್ಯ ಕೆಲಸಗಳಿಗೆ ಬಳಸಿದ್ದಕ್ಕೆ 20.85 ಲಕ್ಷ ರೂ. ದಂಡ..! 417 ಜನರಿಗೆ ನೋಟಿಸ್..!

See also  ಡಿವೋರ್ಸ್‌ ಬೇಕೆಂದು ಕೇಳಿದ ಹೆಂಡತಿ ವಿರುದ್ಧ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಪತಿ..! ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತ್ನಿ..!
  Ad Widget   Ad Widget   Ad Widget   Ad Widget   Ad Widget   Ad Widget