ನ್ಯೂಸ್ ನಾಟೌಟ್: ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಮಹಿಳೆಯೊಬ್ಬರು ತನ್ನ ಮನೆಗೆ ಸೀಕ್ರೆಟ್ ಕ್ಯಾಮೆರಾ ಅಳವಡಿಸಿದ್ದರು. ಆದರೆ ಒಂದು ದಿನ ಮಹಿಳೆ ಕ್ಯಾಮೆರಾದಲ್ಲಿದ್ದ ವಿಡಿಯೋ ನೋಡಿ ಆಘಾತಕ್ಕೊಳಗಾಗಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಹಾಕಿಸಲಾಗಿದ್ದ ಕ್ಯಾಮೆರಾದಲ್ಲಿ ತನ್ನ ಗಂಡನ ಕಳ್ಳಾಟದ ವಿಡಿಯೋ ಸೆರೆಯಾಗಿತ್ತು.
ತನ್ನ ಗಂಡ ಮತ್ತೊಬ್ಬ ಮಹಿಳೆಯೊಂದಿಗಿರುವ ಖಾಸಗಿ ವಿಡಿಯೋ ಪತ್ನಿಗೆ ಸಿಕ್ಕಿದೆ. ಇದರಿಂದ ಕೋಪಗೊಂಡ ಪತ್ನಿ ಸೇಡು ತೀರಿಸಿಕೊಳ್ಳಲು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಾ ವಿಡಿಯೋಗಳನ್ನು ವೈರಲ್ ಮಾಡಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದೆ
ಈ ಮಹಿಳೆಯ ಹೆಸರು ಲಿ. ಅವಳು ತನ್ನ ಒಡಹುಟ್ಟಿದವರ ಸಹಾಯದಿಂದ ತನ್ನ ಗಂಡನ ಮನೆಯಲ್ಲಿ ಗುಪ್ತ ಕ್ಯಾಮೆರಾವನ್ನು ಅಳವಡಿಸಿದ್ದಳು. ಒಂದು ದಿನ ಆಕೆಯ ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದನ್ನು ನೋಡಿದ್ದಾಳೆ. ತನ್ನ ಪತಿ ಜೊತೆಗಿರುವ ಮಹಿಳೆ ಪತಿ ಬಾಡಿಗೆಗೆ ಇದ್ದ ಅದೇ ಮನೆಯ ಒಡತಿಯಾಗಿದ್ದಳು. ಅವಳ ಹೆಸರು ವಾಂಗ್ ಎಂದು ಹೇಳಲಾಗಿದೆ.
ತನ್ನ ಪತಿ ಬೇರೊಬ್ಬ ಮಹಿಳೆಯ ಜೊತೆ ಇರುವುದನ್ನು, ಮತ್ತು ವಿವಾಹೇತರ ಸಂಬಂಧ ಹೊಂದಿರುವುದನ್ನು ನೋಡಿದ ಮಹಿಳೆ ಕೋಪಗೊಂಡು ತನ್ನ ಪತಿ ಮತ್ತು ಮತ್ತೊಬ್ಬ ಮಹಿಳೆಯ ಎಲ್ಲಾ ಖಾಸಗಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾಳೆ.
ವಾಂಗ್ ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ತನ್ನ ಖಾಸಗಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದನ್ನು ತಿಳಿದ ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಲೀ ಅವರನ್ನು ವೀಡಿಯೊ ತೆಗೆದುಹಾಕುವಂತೆ ಒತ್ತಾಯಿಸಿದರು, ಆದರೆ ಲೀ ಇದಕ್ಕೆ ನಿರಾಕರಿಸಿದ್ದಾರೆ. ನಂತರ ವಾಂಗ್, ಲಿ ಮತ್ತು ಅವರ ಒಡಹುಟ್ಟಿದವರ ವಿರುದ್ಧ ಗೌಪ್ಯತೆ ಹಕ್ಕುಗಳು, ಖ್ಯಾತಿ ಮತ್ತು ಇಮೇಜ್ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿ ಮೊಕದ್ದಮೆ ಹೂಡಲಾಗಿದೆ.