Latestಮಹಿಳೆ-ಆರೋಗ್ಯರಾಜ್ಯವೈರಲ್ ನ್ಯೂಸ್

ಬೆಕ್ಕುಗಳಲ್ಲಿ ಮಾರಣಾಂತಿಕ ಎಫ್.​ಪಿ.ವಿ ವೈರಸ್ ಪತ್ತೆ..! ಕರ್ನಾಟಕದ ಈ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳು ಸಾವು..!

829

ನ್ಯೂಸ್‌ ನಾಟೌಟ್: ರಾಜ್ಯದೆಲ್ಲೆಡೆ ಈಗ ಬೆಕ್ಕುಗಳಿಗೆ ಹರಡುತ್ತಿರುವ ಮಾರಣಾಂತಿಕ ಎಫ್​ಪಿವಿ ವೈರಸ್ ಸೋಂಕು ಹರಡುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ ಬೆಕ್ಕುಗಳು. ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಾಣು ಪತ್ತೆಯಾಗಿದೆ.

ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಒಂದು ಕಡೆ 10 ಬೆಕ್ಕುಗಳಿದ್ದರೆ, ಆ ಪೈಕಿ ಒಂದು ಬೆಕ್ಕಿಗೆ ವೈರಸ್ ಸೋಂಕು ತಗಲಿದರೆ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ಎಲ್ಲಾ ಬೆಕ್ಕುಗಳಿಗೂ ವೈರಸ್ ಹರಡುತ್ತದೆ. ಇದರಿಂದಾಗಿ ಬೆಕ್ಕು ಸಾಕಾಣಿಕೆ ಮಾಡುವವರಿಗೆ ಆತಂಕ ಉಂಟಾಗಿದೆ. ಎಫ್​ಪಿವಿ ವೈರಸ್​ ತಗುಲಿದರೆ ಮೂರು ಹಂತದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮೊದಲ ಹಂತದಲ್ಲಿ ವಾಂತಿ, ಬೇಧಿ, ನಿರ್ಜಲೀಕರಣ ಉಂಟಾಗುತ್ತದೆ. ಎರಡನೆ ಹಂತದಲ್ಲಿ ಹೆಚ್ಚಿನ ತಾಪದೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಮೂರನೇ ಹಂತದಲ್ಲಿ ನಿಶ್ಯಕ್ತಿ, ಖಿನ್ನತೆ ಉಂಟಾಗುತ್ತದೆ.

ಕೊರೊನಾ ವೈರಸ್ ರೀತಿ ಎಫ್ ​ಪಿವಿ ವೈರಾಣು ಸೋಂಕಿಗೂ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ ಎನ್ನಲಾಗಿದೆ. ರಾಯಚೂರಿನಲ್ಲಿ ಸದ್ಯ 150 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 100 ಕ್ಕೂ ಹೆಚ್ಚು ಬೆಕ್ಕುಗಳು ಚಿಕಿತ್ಸೆ ಫಲಕಾರಿಯಾಗದೇ ಈಗಾಗಲೇ ಮೃತಪಟ್ಟಿವೆ.

ಇದನ್ನೂ ಓದಿ:  ಸ್ಮಶಾನದ ದಾರಿಗೆ ತಂತಿ ಬೇಲಿ ಹಾಕಿದ ರೈತ..! ರಸ್ತೆಯಲ್ಲೇ ಅಂತ್ಯಸಂಸ್ಕಾರ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು..!

See also  ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎನ್ ಎಂಸಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ, ಸುಳ್ಯ ತಾಲ್ಲೂಕಿನ ಸ್ಥಳನಾಮೆಗಳ ಅಧ್ಯಯನ ಮತ್ತು ಮಾಹಿತಿ ಸಂಗ್ರಹ" ಕಾರ್ಯಗಾರ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget