ಕ್ರೈಂ

ಟಾಟಾ ಕ್ಸೆನನ್ ಹಾಗೂ ಸ್ವಿಫ್ಟ್ ಮುಖಾಮುಖಿ ಡಿಕ್ಕಿ, ಮೂವರು ಅಪಾಯದಿಂದ ಪಾರು

361
Spread the love

ಸುಳ್ಯ: ಇಲ್ಲಿನ ಕನಕಮಜಲು ಬಳಿ ಟೋಯಿಂಗ್ ವಾಹನ ಟಾಟಾ ಕ್ಸೆನನ್ ಹಾಗೂ ಮಾರುತಿ ಸುಝುಕಿ ಸ್ವಿಪ್ಟ್ ಕಾರು ಪರಸ್ಪರ ಡಿಕ್ಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದು, ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಪೈಚಾರಿನ ಬದ್ರುದ್ದಿನ್, ಪೈಚಾರು ಮಸೀದಿಯ ಮುನೀರ್ ಹಾಗೂ ಅಶ್ರಫ್ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಮೈಸೂರಿಗೆ ಅಪಘಾತವಾದ ಕಾರೊಂದನ್ನು ಕೊಂಡೊಯ್ಯುತ್ತಿದ್ದ ಟೊಯಿಂಗ್ ಟಾಟಾ ಕ್ಸೆನಾನ್ ವಾಹನವು ಕೋಡಿ ತಿರುವಿಗೆ ತಲುಪುತ್ತಿದ್ದಂತೆ ವಾಹನದ ಬ್ರೇಕ್ ವೈಪಲ್ಯಗೊಂಡು ಮುಂಭಾಗದಿಂದ ಬರುತ್ತಿದ್ದ ಪೈಚಾರಿನ ಬದ್ರುದ್ದೀನ್ ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿದೆ. ಸದ್ಯ ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

See also  ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆ ದುರಂತ ಅಂತ್ಯ ! ನಾಲ್ವರು ಮಕ್ಕಳನ್ನು ಅಗಲಿದ ಬಡ ತಾಯಿ!
  Ad Widget   Ad Widget   Ad Widget   Ad Widget   Ad Widget   Ad Widget