ಕಲ್ಲುಗುಂಡಿ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೈಪಡ್ಕ ರಸ್ತೆಯಲ್ಲಿ ಎಚ್ ಟಿ ಕರೆಂಟ್ ವಯರ್ ವೊಂದು ತುಂಡಾಗುವ ಸ್ಥಿತಿಯಲ್ಲಿದ್ದು ನ್ಯೂಸ್ ನಾಟೌಟ್ ತಂಡ ವರದಿ ಮಾಡಿದ ಬೆನ್ನಲ್ಲೇ ಮೆಸ್ಕಾಂ ಲೈನ್ ಮ್ಯಾನ್ ಗಳ ತಂಡ ಕ್ಷಿಪ್ರವಾಗಿ ಕೆಲಸ ನಿರ್ವಹಿಸಿದೆ. ವರದಿ ಪ್ರಕಟವಾದ ಕೇವಲ ಅರ್ಧಗಂಟೆಯೊಳಗೆ ಅಪಾಯಕಾರಿ ವಯರ್ ಅನ್ನು ತೆರವುಗೊಳಿಸಿ ಜನರ ಆತಂಕವನ್ನು ದೂರ ಮಾಡಿದೆ. ಲೈನ್ ಮ್ಯಾನ್‌ಗಳಾದ ಸಂಗಮೇಶ್, ಮಣಿಕಂಠ ಹಾಗೂ ನವೀನ್ ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



