ಸುಳ್ಯ

ಕೈಪಡ್ಕ ರಸ್ತೆಯಲ್ಲಿ ತೆರಳುವ ಜನರೇ ಎಚ್ಚರ, ಜೀವ ತೆಗೆಯಲು ಕರೆಂಟ್‌ ಲೈನ್‌ನಲ್ಲಿ ಕುಳಿತಿದ್ದಾನೆ ಯಮರಾಯ..!

934

ಕಲ್ಲುಗುಂಡಿ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೈಪಡ್ಕ ರಸ್ತೆಯಲ್ಲಿ ಎಚ್‌ ಟಿ ಕರೆಂಟ್‌ ವಯರ್ ವೊಂದು ತುಂಡಾಗುವ ಸ್ಥಿತಿಯಲ್ಲಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ಸಂಜೆ ಹೊತ್ತಿಗೆ ಕೈಪಡ್ಕ ರಸ್ತೆಗೆ ತಿರುಗುವ ಕೊರಗಜ್ಜ ಸ್ವಾಮಿಯ ದ್ವಾರದ ಬಳಿ ತೆಂಗಿನ ಗರಿಯೊಂದು ಲೈನ್‌ ಮೇಲೆ ಬಿದ್ದಾಗ ಬೆಂಕಿ ಹೊತ್ತಿಕೊಂಡು ವಯರ್ ಬಹುತೇಕ ಸುಟ್ಟು ಕರಕಲಾಗಿದೆ. ಸದ್ಯ ಸಿಂಗಲ್‌ ಲೇಯರ್‌ನಲ್ಲಿ ನಿಂತಿರುವ ಎಚ್ ಟಿ ಲೈನ್‌ ನಲ್ಲಿ ಸಾಕ್ಷಾತ್‌ ಯಮರಾಯನೇ ಬಂದು ಕುಳಿತಿದ್ದಾನೆ.

ಕೀಲಾರು ಮೂಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದಿನನಿತ್ಯ ನೂರಾರು ಜನರು, ಮಕ್ಕಳು, ವೃದ್ಧರು ಓಡಾಡುತ್ತಾರೆ. ಅಲ್ಲದೆ ದನ ಕರುಗಳು ಕೂಡ ಈ ಭಾಗದಲ್ಲಿ ಮೇಯಲು ಬರುತ್ತವೆ. ಸದ್ಯ ಇನ್ನೊಂದು ತೆಂಗಿನ ಗರಿ ಬೀಳುವುದಕ್ಕೆ ಸಿದ್ಧವಾಗಿದ್ದು ಯಾವ ಕ್ಷಣದಲ್ಲೂ ಕರೆಂಟ್‌ ವಯರ್ ಮೇಲೆ ಬೀಳಬಹುದು. ಹಾಗೇ ಆಗಿದ್ದೇ ಆದಲ್ಲಿ ವಯರ್ ತುಂಡಾಗಿ ಧರೆಗೆ ಉರುಳಬಹುದು, ಜೀವ ಹಾನಿಯಾಗಬಹುದು. ಈ ಬಗ್ಗೆ ಸ್ಥಳೀಯ ಆಡಳಿತ ವಿಭಾಗ ಹಾಗೂ ಲೈನ್‌ ಮ್ಯಾನ್‌ ಗೆ ಖುದ್ದಾಗಿ ಮಾಹಿತಿ ನೀಡಿ ಎರಡು ದಿನವಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಮಾಯಕರ ಜೀವ ಹೋಗುವ ಮೊದಲು ಜನಪ್ರತಿನಿಧಿಗಳು ಎಚ್ಚೆತ್ತು ಇದನ್ನು ಸರಿಪಡಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.

See also  ಗೂನಡ್ಕ : ಅಬ್ಬಬ್ಬಾ..!ಮನೆಯ ಟೀಪಾಯಿಯಡಿಯಲ್ಲಿ ಅವಿತು ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ..!,ಮನೆಯೊಳಗೆ ಸರ್ಪ ಬಂದಿದ್ದೇಗೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget