ಕರಾವಳಿ

ಕಡ್ಲಾರು: ಜಲಶ್ರೀ ಪ್ರತಿಷ್ಠಾನಕ್ಕೆ ಚಾಲನೆ

575

ಕಡ್ಲಾರು: ಜ.21ರಂದು ಕಡ್ಲಾರು ಜಲಶ್ರೀ ಪ್ರತಿಷ್ಠಾನಕ್ಕೆ ಚಾಲನೆ ನೀಡಲಾಯಿತು. ಮರೆಯಾಗುತ್ತಿರುವ ಸಂಸ್ಕೃತಿ ಉಳಿವಿಗಾಗಿ ಪ್ರತಿಷ್ಠಾನ ಕಾರ್ಯ ನಿರ್ವಹಿಸಲಿದೆ. ಕಾರ್ಯಕ್ರಮವನ್ನು ಸ.ಪ.ಪೂ. ಕಾಲೇಜು ಪಂಜದ ಪ್ರಭಾರ ಪ್ರಾಂಶುಪಾಲ ವೆಂಕಪ್ಪ ಕೇನಾಜೆ ಉದ್ಘಾಟಿಸಿದರು.

ಹವ್ಯಾಸಿ ಬರಹಗಾರ ಮತ್ತು ನಿವೃತ್ತ ಶಿಕ್ಷಕರಾದ ಕುಶಾಲಪ್ಪ ಗೌಡ ರುದ್ರಚಾಮುಂಡಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ರಮೇಶ್ ಮೆಟ್ಟಿನಡ್ಕ ಮತ್ತು ಹಿರಿಯ ದೈವ ನರ್ತಕ ವಾಸು ಪರವ ಕಂದ್ರಪ್ಪಾಡಿ ದೀಪ ಬೆಳಗಿಸಿ ಕ್ರಮವಾಗಿ ಕವಿರಾಜಮಾರ್ಗ ಕಾವ್ಯವಾಚನ, ರಂಗಗೀತೆ ಗಾಯನ, ಮತ್ತು ಪಾಡ್ದನ ಹಾಡುವುದರ ಮೂಲಕ ಉದ್ಘಾಟಿಸಿದಾಗ ಮುಖ್ಯ ಅತಿಥಿಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ನಿತ್ಯಾನಂದ ಮುಂಡೋಡಿ ಮತ್ತು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಗುತ್ತಿಗಾರು ಇದರ ಮೊಕ್ತೇಸರರಾಗಿರುವ ವೆಂಕಟ್ ವಳಲಂಬೆ ಶಂಖಧ್ವನಿಯೊಂದಿಗೆ ವಿಭಿನ್ನವಾಗಿ ಜಲಶ್ರೀ ಪ್ರತಿಷ್ಠಾನಕ್ಕೆ ಚಾಲನೆ ಕೊಟ್ಟರು.

ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಭವಾನಿಶಂಕರ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಗುತ್ತಿಗಾರು ಅಧ್ಯಕ್ಷ ಚಂದ್ರಶೇಖರ ಕಡೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಯಶೋದ ಬಾಳೆಗುಡ್ಡೆ, ಮೀನಾಕ್ಷಿ ಉಮೇಶ್ ಮುಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸ.ಕಿ.ಪ್ರಾ ಶಾಲೆ ವಾಲ್ತಾಜೆ ಇಲ್ಲಿನ ವಿಧ್ಯಾರ್ಥಿಗಳಾದ ಹಿತೇಶ್ ಮೀನಾಜೆ, ಚಂಭಾಶ್ರೀ ಕಡೋಡಿ, ಯಜ್ಞಶ್ರೀ ಬಳ್ಕಜೆ, ಹರ್ಷಿಣಿ ಕೊರತ್ಯಡ್ಕ ಪ್ರಾರ್ಥನೆ ಹಾಡಿದರು. ಪ್ರತಿಷ್ಠಾನದ ಅಧ್ಯಕ್ಷ ನಿರಂಜನ ಕಡ್ಲಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಶರತ್ ಮರ್ಗಿಲಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರತೀಕ್ ಆಚಾರ್ಯ ಕಂದ್ರಪ್ಪಾಡಿ ವಂದಿಸಿದರು. ಗೌರವ ಸಲಹೆಗಾರ ಪ್ರವೀಣ ಕಾಟೂರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಧನಂಜಯ ಕಡ್ಲಾರು, ರಕ್ಷಿತ್ ಕಡ್ಲಾರು, ಕುಸುಮಾಧರ ಕೊಂಬೆಟ್ಟು, ಪ್ರಮೀಳಾ ಕಡ್ಲಾರು ಮತ್ತು ಯುವ ಸೇವಾ ಸಂಘ (ರಿ.) ವಾಲ್ತಾಜೆ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

See also  ತಂಗಿ ಮದುವೆ ಮಾಡಲು ಗಾಂಜಾ ಮಾರಲು ಹೋದವ ಜೈಲುಪಾಲಾದ..! ಪುತ್ತೂರು ಮೂಲದ ಬದ್ರುದ್ದಿನ್ ಬೆಂಗಳೂರಿನಲ್ಲಿ ಅರೆಸ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget