ಕ್ರೈಂ

ಪುತ್ತೂರು: ಹಿರಿಯ ಪತ್ರಕರ್ತ ಬಿಟಿ ರಂಜನ್ ಇನ್ನಿಲ್ಲ

608

ಪುತ್ತೂರು: ಹಿರಿಯ ಪತ್ರಕರ್ತ ಬಿ ಟಿ ರಂಜನ್ (60) ಶನಿವಾರ ಮುಂಜಾನೆ ನಿಧನರಾದರು. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ಅವರು ದಾಖಲಾಗಿದ್ದರು.

30 ವರ್ಷಗಳಿಂದಲೂ ಹೆಚ್ಚು ಕಾಲ ಕನ್ನಡ ಪತ್ರಿಕಾರಂಗದಲ್ಲಿ ಕೆಲಸ ಮಾಡುತ್ತಿದ್ದ ಬಿ ಟಿ ರಂಜನ್‌ ಅವರು ಮುಂಗಾರು ಪತ್ರಿಕೆಯಿಂದ ವೃತ್ತಿಜೀವನ ಆರಂಭಿಸಿದ್ದರು. ಹೊಸದಿಗಂತ ಸೇರಿದಂತೆ ಉದಯವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ ಕಳೆದ ಮೂರು ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪುತ್ತೂರು ತಾಲೂಕು ಪತ್ರಕರ್ತ ಸಂಘದ ಸ್ಥಾಪಕಾಧ್ಯಕ್ಷರಾಗಿ ಸಂಘವನ್ನು ಕಟ್ಟಿ ಬೆಳೆಸಿದ ಬಿ ಟಿ ರಂಜನ್ ಅವರು ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದರು. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

See also  ಮಾರ್ಟಿನ್ ಚಿತ್ರದ ರಿವ್ಯೂ ಮಾಡಿದ್ದ ರೀಲ್ಸ್ ಸ್ಟಾರ್ ಗೆ ನಟ ಧ್ರುವ ಸರ್ಜಾ ಅಭಿಮಾನಿಗಳಿಂದ ತರಾಟೆ..! ಕ್ಷಮೆ ಯಾಚಿಸಿದ ಕಿರುಚಿತ್ರ ನಟ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget