Latestಕ್ರೈಂಮಹಿಳೆ-ಆರೋಗ್ಯ

ಜೈಲಿನಲ್ಲಿದ್ದ 13 ಕೈದಿಗಳಿಗೆ ಹೆಚ್‌ ಐವಿ ಸೋಂಕು ಪತ್ತೆ..! ಗೌಪ್ಯ ರೀತಿಯಲ್ಲಿ ಚಿಕಿತ್ಸೆಗೆ ತಯಾರಿ..!

381
Spread the love

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಮೌ ಎಂಬ ಜೈಲಿನ ಕೈದಿಗಳಲ್ಲಿ ಹೆಚ್ ​ಐವಿ ಪಾಸಿಟಿವ್ ಕಂಡುಬಂದಿದೆ. ಜೈಲಿನಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಬಳಿಕ ಬಂದ ವರದಿಯಲ್ಲಿ 13 ಕೈದಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಪೈಕಿ ಬಲ್ಲಿಯಾ ಎಂಬಲ್ಲಿನ 10 ಮತ್ತು ಮೌ ಎಂಬಲ್ಲಿಂದ 3 ಕೈದಿಗಳು ಸೇರಿದ್ದಾರೆ. ಇವರಲ್ಲಿ ಒಬ್ಬ ಮಹಿಳಾ ಕೈದಿಯೂ ಇದ್ದಾರೆ. ಪ್ರಸ್ತುತ ಮೌ ಜೈಲಿನಲ್ಲಿ 1,086 ಕೈದಿಗಳಿದ್ದು, 650 ಕೈದಿಗಳು ಬಲ್ಲಿಯಾ ಜಿಲ್ಲಾ ಜೈಲಿನಿಂದ ಬಂದವರಾಗಿದ್ದಾರೆ. ಜುಲೈ 2024ರಿಂದ ಬಲ್ಲಿಯಾ ಜಿಲ್ಲಾ ಜೈಲು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಇಲ್ಲಿನ ಕೈದಿಗಳನ್ನು ಮೌ ಜೈಲಿಗೆ ಸ್ಥಳಾಂತರಿಸಲಾಗಿದೆ.

ದಾದ್ರಿ ಮೇಳದಲ್ಲಿ ಅಸುರಕ್ಷಿತ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಕೈದಿಗಳು ಹೆಚ್ ​ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೋಂಕಿತ ರೋಗಿಗಳಿಗೆ ಗೌಪ್ಯ ರೀತಿಯಲ್ಲಿ ಎಆರ್‌ ಟಿ ಕೇಂದ್ರದಿಂದ ಕಾರ್ಡ್ ತಯಾರಿಸಲಾಗುತ್ತದೆ ಮತ್ತು ಔಷಧಿ ಪ್ರಾರಂಭಿಸಲಾಗುತ್ತದೆ ಎನ್ನಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

See also  ಹಠಾತ್ ಹೃದಯಾಘಾತ, ಸಂಪಾಜೆಯ ನಿವೃತ್ತ ಸೊಸೈಟಿ ಮ್ಯಾನೇಜರ್ ನಿಧನ
  Ad Widget   Ad Widget   Ad Widget   Ad Widget