ಕ್ರೀಡೆ/ಸಿನಿಮಾ

ಐಪಿಎಲ್ ಗೂ ಮುನ್ನ ಗುಜರಾತ್ ಟೈಟಾನ್ಸ್ ಗೆ ಆಘಾತ, ಕೀ ಪ್ಲೇಯರ್ ಔಟ್

330
Spread the love

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಹೊಸ ತಂಡವಾಗಿ ಕಾಲಿಟ್ಟಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡಕ್ಕೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ದೊಡ್ಡ ಆಘಾತ ಉಂಟಾಗಿದೆ. 2 ಕೋಟಿ ಕೊಟ್ಟು ಖರೀದಿ ಮಾಡಿದ್ದ ಸ್ಟಾರ್ ಆಟಗಾರ ನಾನುಆಡುವುದಿಲ್ಲ ಎಂದು ಐಪಿಎಲ್ 2022 ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ.

ಐಪಿಎಲ್ 2022 ಮೆಗಾ ಹರಾಜಿನಲ್ಲಿ 1.5 ಕೋಟಿ ಮೂಲಬೆಲೆ ಹೊಂದಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಓಪನರ್ ಜೇಸನ್ ರಾಯ್ ಅವರು ಐಪಿಎಲ್ 2022 ರಿಂದ ಹಿಂದೆ ಸರಿದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡ ಇವರನ್ನು 2 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಇವರನ್ನ ಗುಜರಾತ್ ಶುಭ್ಮನ್ ಗಿಲ್ ಜೊತೆ ಓಪನರ್ ಆಗಿ ಕಣಕ್ಕಿಳಿಸುವ ಪ್ಲಾನ್​ನಲ್ಲಿತ್ತು. ಆದರೀಗ ಟೂರ್ನಿ ಆರಂಭದಕ್ಕೆ ಕೆಲವು ದಿನಗಳಿವೆ ಎನ್ನುವಷ್ಟರಲ್ಲಿ ರಾಯ್ ವೈಯಕ್ತಿಕ ಕಾರಣ ನೀಡಿ ಐಪಿಎಲ್ 2022 ಆಡುವುದಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೆ ಜೇಸನ್ ರಾಯ್ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಪಾಲ್ಗೊಂಡಿದ್ದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್​ಮನ್ ಆಗಿದ್ದರು. ಒಂದು ಶತಕ, ಎರಡು ಅರ್ಧಶತಕದಿಂದ 303 ರನ್ ಗಳಿಸಿ 170.22 ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು. ಸತತವಾಗಿ ಬಯೋ ಬಬಲ್​ನಲ್ಲಿ ಇರುತ್ತಿರುವ ಕಾರಣ ವಿಶ್ರಾಂತಿಗಾಗಿ ಐಪಿಎಲ್ ತೊರೆದಿದ್ದಾರೆ ಎಂದು ಹೇಳಲಾಗಿದೆ.

See also  ನಟಿ ಸಾಯಿಪಲ್ಲವಿಗೆ ದಿಢೀರ್ ಮದುವೆ,ಪಡ್ಡೆ ಹುಡುಗರು ಶಾಕ್ ..!ಸೈಲೆಂಟಾಗಿ ಖ್ಯಾತ ನಿರ್ದೇಶಕನನ್ನು ಮದುವೆಯಾಗಿದ್ದೇಕೆ?
  Ad Widget   Ad Widget   Ad Widget   Ad Widget   Ad Widget   Ad Widget