ಕರಾವಳಿ

ಇನ್ನರ್ ವೀಲ್ ಕ್ಲಬ್ ಸುಳ್ಯಕ್ಕೆ ಜಿಲ್ಲಾಧ್ಯಕ್ಷೆ ಪುಷ್ಪಾ ಗುರುರಾಜ್ ಭೇಟಿ

ಸುಳ್ಯ: ಇನ್ನರ್ ವೀಲ್ ಕ್ಲಬ್ ಸುಳ್ಯಕ್ಕೆ ಕ್ಲಬ್ ನ ಡಿಸ್ಟ್ರಿಕ್ಟ್ 318 ನ ಜಿಲ್ಲಾಧ್ಯಕ್ಷೆ ಪುಷ್ಪಾ ಗುರುರಾಜ್ ಅಧಿಕೃತ ಭೇಟಿ ನಡೆಸಿದರು. ಈ ಸಂಧರ್ಭದಲ್ಲಿ ಕ್ಲಬ್ ನ ವತಿಯಿಂದ ರೋಟರಿ ಶಾಲೆಯ ಮುಂಭಾಗದಲ್ಲಿ ಅಳವಡಿಸಲಾದ ಸುರಕ್ಷಾ ಸೂಚನಾ ಫಲಕವನ್ನು ಅನಾವರಣಗೊಳಿಸಲಾಯಿತು.

ಬಳಿಕ ಕ್ಲಬ್ ನ ಪದಾಧಿಕಾರಿಗಳು ಮತ್ತು ಸದಸ್ಯೆಯರೊಂದಿಗೆ ಸಮಾಲೋಚನಾಸಭೆ ನಡೆಸಿ ಜಿಲ್ಲಾಧ್ಯಕ್ಷೆ, ಈ ವರೆಗಿನ ಕಾರ್ಯಾಚಟುವಟಿಕೆಗಳ ಮಾಹಿತಿ ಪಡೆದುಕೊಂಡು ಸಲಹೆ ಸೂಚನೆಗಳನ್ನು ನೀಡಿದರು. ಮೀನಾಕ್ಷಿ ಸುಂದರ್ ಪ್ರಾರ್ಥನೆಯೊಂದಿಗೆ ಸಭೆ ಆರಂಭಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಪೂಜಾ ಸಂತೋಷ್ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ  ಪುಷ್ಪಾ ಗುರುರಾಜ್ ಮತ್ತು ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿನುತಾ ಶೇಟ್ ಕ್ಲಬ್ ನ ಕಾರ್ಯಕ್ರಮಗಳ ವರದಿ ವಾಚಿಸಿದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಪ್ರಭಾಕರ ನಾಯರ್ ವಿಶೇಷ ಸಂಚಿಕೆ ಇನ್ನರ್ ಸ್ಫೂರ್ತಿ ಬಿಡುಗಡೆ ಗೊಳಿಸಿದರು. ಕ್ಲಬ್ ನ ನಿಕಟಪೂರ್ವ ಅಧ್ಯಕ್ಷೆ ಜಯಮಣಿ ಮಾಧವ ಜಿಲ್ಲಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು.ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷೆ ಕ್ಲಬ್ ನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮಹಿಳಾ ಸಬಲೀಕರಣ ವನ್ನು ಕೇಂದ್ರೀಕರಿಸಿ ಪ್ರಾಜೆಕ್ಟ್ ಹಮ್ಮಿಕೊಳ್ಳುವಂತೆ ಸೂಚಿಸಿದರು. ಅನಾರೋಗ್ಯ ಪೀಡಿತ ಪೈಚಾರಿನ ಮಹಿಳೆಗೆ ಚಿಕಿತ್ಸಾ ವೆಚ್ಚ ಮತ್ತು ಪೆರಾಜೆಯ ಬಡ ವಿದ್ಯಾರ್ಥಿನಿ ಗೆ ಶಾಲಾ ಪರಿಕರ ವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

Related posts

ಅಪರೂಪದ ಸುಳಿಗಾಳಿ: ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲಿನಲ್ಲಿ ಅಪಾರ ಹಾನಿ

ಭೀಕರ ರಸ್ತೆ ಅಪಘಾತ,ಶಬರಿಮಲೆ ಯಾತ್ರಾರ್ಥಿಗಳ ವಾಹನ- ರಿಕ್ಷಾ ಡಿಕ್ಕಿ: ಮಕ್ಕಳು ಸೇರಿದಂತೆ ಐವರು ಮೃತ್ಯು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಇಬ್ಬರು ಹಾಲಿ ಸಂಸದರಿಗೆ ಬಿಜೆಪಿಯಿಂದ ಸಿಗಲ್ಲ ಟಿಕೆಟ್‌..! MP ಇಲೆಕ್ಷನ್‌ಗೆ ಕಮಲಪಾಳಯದಲ್ಲಿ ನಡಿತಿದೆ ತೆರೆಮರೆಯ ತಯಾರಿ..