ಕ್ರೀಡೆ/ಸಿನಿಮಾ

ಇತಿಹಾಸ ಬರೆದ ಭಾರತ ಮಹಿಳಾ ಹಾಕಿ ತಂಡ: ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶ

615
Spread the love

ಟೋಕಿಯೊ: ಟೋಕಿಯೊದಲ್ಲಿ ನಡೆಯುತ್ತಿರುವ 32ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ. ಭಾರತ ಮಹಿಳೆಯರ ಹಾಕಿ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್ ಗೇರಿದೆ. ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ 1-0  ಗೋಲಿನ ಅಂತರದಲ್ಲಿ ವಿರೋಚಿತ ಗೆಲುವು ದಾಖಲಿಸಿದರು. ಪಂದ್ಯದ ಎರಡನೇ ಕ್ವಾರ್ಟರ್ ನಲ್ಲಿ ಗುರ್ಜಿತ್ ಕೌರ್ ಬಾರಿಸಿದ ಗೋಲಿನ ಸಹಾಯದಿಂದ ಭಾರತ ಇತಿಹಾಸ ನಿರ್ಮಿಸಿತು.

ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತೀಯ ವನಿತೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದಂತಾಗಿದೆ. ಇತಿಹಾಸದಲ್ಲಿಯೇ ಇದುವರೆಗೂ ಭಾರತೀಯ ವನಿತೆಯರ ಹಾಕಿ ತಂಡ ಯಾವುದೇ ಒಲಿಂಪಿಕ್ಸ್ನಲ್ಲಿಯೂ ಸೆಮಿಫೈನಲ್ ಹಂತವನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಪೂಲ್ ಹಂತದ ಮೊದಲ 3 ಪಂದ್ಯಗಳಲ್ಲಿ ಸತತವಾಗಿ ಸೋಲುವುದರ ಮೂಲಕ ದೊಡ್ಡ ಮಟ್ಟದ ನಿರಾಸೆ ಅನುಭವಿಸಿತ್ತು. ಆದರೆ ಬಳಿಕದ 2 ಪಂದ್ಯಗಳಲ್ಲಿ ಫೀನಿಕ್ಸ್ ನಂತೆ ಎದ್ದು ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದು ವಿಶೇಷವಾಗಿದೆ.

.

See also  ಕ್ಯಾಚ್ ಬಿಟ್ಟಿದ್ದಕ್ಕೆ ಸಹ ಆಟಗಾರನ ಕಪಾಳಕ್ಕೆ ಬಾರಿಸಿದ ಪಾಕ್ ಬೌಲರ್
  Ad Widget   Ad Widget   Ad Widget   Ad Widget   Ad Widget   Ad Widget