ದೇಶ-ಪ್ರಪಂಚ

ಅಧಿಕ ಪ್ರಸಂಗ ಮಾಡಿದ್ರೆ ಹುಷಾರ್‌..! ತಾಲಿ​ಬಾನ್, ಪಾಕ್ ಗೆ ಭಾರತ ಸೇನೆ ಎಚ್ಚರಿಕೆ

30

ನವದೆಹಲಿ: ತಾಲಿಬಾನ್ ನಿಯಂತ್ರಣಕ್ಕೆ ಒಳಪಟ್ಟಿರುವ ಅಫ್ಘಾನಿಸ್ತಾನದಿಂದ ನಡೆಯುವ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಮತ್ತು ಭಾರತವನ್ನು ಗುರಿಯಾಗಿಸಿಕೊಂಡು ನಡೆಸುವ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಈ ಮೂಲಕ ಆಫ್ಘನ್ ನೆಲ​ವನ್ನು ಬಳ​ಸಿ​ಕೊಂಡು ಭಾರ​ತ​ದಲ್ಲಿ ಉಗ್ರ ಚಟು​ವ​ಟಿ​ಕೆಗೆ ಸಂಚು ರೂಪಿ​ಸು​ತ್ತಿ​ರುವ ಪಾಕಿ​ಸ್ತಾನಿ ಉಗ್ರರು ಹಾಗೂ ತಾಲಿ​ಬಾ​ನ್‌ ಗೆ ಎಚ್ಚ​ರಿಕೆಯ ಸಂದೇ​ಶ ರವಾ​ನಿ​ಸಿ​ದ್ದಾ​ರೆ.

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಿಭಾಯಿಸಿದ ರೀತಿಯಲ್ಲಿಯೇ ತಾಲಿಬಾನ್ ಬೆದರಿಕೆಯನ್ನು ಕೂಡ ನಿಭಾಯಿಸಲಾಗುವುದು. ಇತರ ದೇಶ​ಗಳು ಕೂಡ ಈ ಯತ್ನಕ್ಕೆ ಸಹ​ಕ​ರಿ​ಸ​ಬೇ​ಕು ಎಂದು ಹೇಳಿ​ದ​ರು.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳಲಿದೆ ಎನ್ನುವುದನ್ನು ಭಾರತ ನಿರೀಕ್ಷಿಸಿತ್ತು. ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಅಫ್ಘಾನಿಸ್ತಾನದಿಂದ ನಡೆಯುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಹೀಗಾಗಿ ಜಾಗತಿಕ ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತವು ಅಮೆರಿಕ, ಜಪಾನ್ ಮತ್ತು ಆಸ್ಪ್ರೇಲಿಯಾ ಮಧ್ಯೆ ಸಹಕಾರ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿ​ದ​ರು.