ಕ್ರೈಂ

ವಿಶ್ವಕಪ್‌ ಟಿ20: ಪಾಕ್‌ ವಿರುದ್ಧ ಭಾರತ ಸೋಲು, ಟೀವಿ ನೋಡುತ್ತಲೇ ಪ್ರಾಣಬಿಟ್ಟ ಕೊಡಗಿನ ಕ್ರಿಕೆಟ್‌ ಅಭಿಮಾನಿ

842

ಮಡಿಕೇರಿ: ಐಸಿಸಿ ವಿಶ್ವಕಪ್ ಟಿ20 ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯ ನೋಡುತ್ತಿದ್ದ ಅನೇಕ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೆ ಕೊಡಗಿನಲ್ಲೊಬ್ಬರು ಪಂದ್ಯ ವೀಕ್ಷಿಸುತ್ತಲೇ ಹೃದಯಾಘಾತದಿಂದ ನಿಧನರಾಗಿರುವ ಘಟನೆ ನಡೆದಿದೆ. ಸೋಮವಾರಪೇಟೆಯ ದೊಡ್ಡ ಮಳ್ತೆ ಗ್ರಾಮದಲ್ಲಿ ಭಾನುವಾರ ಡಿಎ ಉದಯ್ (55 ವರ್ಷ) ಟೀವಿಯಲ್ಲಿ ಭಾರತ -ಪಾಕ್ ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದರು. ಭಾರತದ ಸೋಲಿನ ಸಂದರ್ಭದಲ್ಲಿ ಅವರು ತೀವ್ರವಾಗಿ ಮನನೊಂದಿದ್ದರು. ಇದಾದ ಹತ್ತು ನಿಮಿಷದಲ್ಲಿ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ವೇಳೆಗಾಗಲೇ ಅವರು ಸಾವಿಗೀಡಾಗಿದ್ದರು ಎಂದು ತಿಳಿದು ಬಂದಿದೆ.

See also  ಪಹಲ್ಗಾಮ್ ​ನಲ್ಲಿ ಉಗ್ರರಿಗೆ ಬೆಂಬಲ ನೀಡಿದ್ದ 175 ಶಂಕಿತರು ಪೊಲೀಸ್ ವಶಕ್ಕೆ..! ಇಲ್ಲಿವರೆಗೆ ಉಗ್ರರ 8 ಮನೆಗಳು ಧ್ವಂಸ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget