ಇಸ್ಲಾಮಾಬಾದ್: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಇಸ್ಲಾಮಿಕ್ ಸಹಕಾರ ಸಂಘ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡುವ ವೇಳೆ ತಮ್ಮ ಭಾಷಣದಲ್ಲಿ ಅವರು ತಾಲಿಬಾನ್ ಅನ್ನು ಸಮರ್ಥಿಸಿಕೊಳ್ಳುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸದಿರುವುದು ಆಫ್ಘನ್ ಸಂಸ್ಕೃತಿಯ ಭಾಗ ಎಂದಿದ್ದರು. ಈ ಹೇಳಿಕೆ ಭಾರಿ ಟೀಕೆಗೆ ಕಾರಣವಾಗಿದೆ. ಮಾನವ ಹಕ್ಕುಗಳ ಸಂಘಟನೆ ಪ್ರಕಾರ ೨೦೨೧ ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಕೆಟ್ಟ ವರ್ಷ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಮಹಿಳೆಯರಿಗೆ ದೇಶದಲ್ಲಿದ್ದ ಅಷ್ಟಿಷ್ಟು ಹಕ್ಕುಗಳು, ಸ್ವಾತಂತ್ರ್ಯದ ಕಳೆದುಹೋಗಿತ್ತು ಎಂದು ತಿಳಿಸಲಾಗಿತ್ತು.