ಟೋಕಿಯೋ: ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. 38 ವರ್ಷದ ಹಾಸನ ಮೂಲದ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ದೇಶದ ಮೊದಲ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಇಂದು ಬೆಳಗ್ಗೆ ನಡೆದ ಎಸ್‌ಎಲ್ 4 ವಿಭಾಗದ ಫೈನಲ್‌ನಲ್ಲಿ ಫ್ರಾನ್ಸ್ ನ ವಿಶ್ವ ಚಾಂಪಿಯನ್ ಲುಕಾಸ್ ಮಝುರ್ ವಿರುದ್ಧ 21-15, 21-15-21 ಗೇಮ್‌ಗಳಿಂದ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಅವರು ಪ್ರಸ್ತುತ ಉತ್ತರ ಪ್ರದೇಶದ ನೋಯ್ಡಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಿಂದ ಬಂದಿರುವ ಪ್ರತಿಭೆ ಐಎಎಸ್ ನಂತಹ ದೊಡ್ಡ ಹುದ್ಧೆಯಲ್ಲಿದ್ದರೂ ಕ್ರೀಡೆಯಲ್ಲೂ ಗೆದ್ದು ಸಾಧನೆ ಮಾಡಬಹುದು ಅನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.