ಪುತ್ತೂರು

ಮೂಡುಬಿದಿರೆ: ಪತಿ-ಪತ್ನಿ ಜಗಳ, ಪತ್ನಿಯ ಕೊಲೆಯಲ್ಲಿ ಅಂತ್ಯ

ಮೂಡುಬಿದಿರೆ: ಇಲ್ಲಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಪತಿ- ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಪ್ರಕರಣ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಂಗಳವಾರ ಸಾಯಂಕಾಲ ಪತಿ ದಿನ್ ರಾಜ್ ಹಾಗೂ ಪತ್ನಿ ಸುನೀತಾ(30) ಮಧ್ಯೆ ಜಗಳ ನಡೆದಿದೆ. ಈ ಸಂದರ್ಭ ದಿನ್ ರಾಜ್ ‘ಬಲಾಯಿ’ ನಿಂದ ಹೆಂಡತಿಯ ತಲೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಸುನೀತಾ ತಲೆಯಿಂದ ರಕ್ತ ಸೋರುತ್ತಿರುವುದನ್ನು ಕಂಡ ದಿನ್ ರಾಜ್ ಸುನೀತಾ ಅವರ ಸಂಬಂಧಿಗೆ ಕರೆ ಮಾಡಿದ್ದಾನೆ. ಸುನೀತಾ ಸಹೋದರ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾನೆ. ಮೊದಲಿಗೆ ಬೆಳುವಾಯಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದಾಖಲಿಸಲು ನಿರಾಕರಿಸಿದ್ದಾಗ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು . ಅಧಿಕ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಸುನೀತಾ ಮೃತಪಟ್ಟಿದ್ದಾರೆ. ದಿನ್ ರಾಜ್ ನನ್ನು ಬುಧವಾರ ಬೆಳಗ್ಗೆ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

Related posts

ಪುತ್ತೂರು: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಬದ್ರುದ್ದೀನ್‌ಗೆ 2 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

ಪುತ್ತೂರು: ಬೈಕ್‌ನಲ್ಲಿ ಬಂದ ಯುವಕನಿಂದ ಯುವತಿಯ ಕತ್ತು ಸೀಳಿ ಪರಾರಿ ಪ್ರಕರಣ, ಆರೋಪಿ ಅರೆಸ್ಟ್

ಪುತ್ತೂರು:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನ ಬಯಲಾಟ,ಯಕ್ಷಗಾನ ಅಭಿಮಾನಿಗಳ ಮನಸೆಳೆಯಲಿದೆ ‘ಧರ್ಮ ಸಿಂಹಾಸನ’