ಕ್ರೈಂ

ಹೊಸ್ಮಾರು: ಕರೋನಾಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ

363
Spread the love

ಕಡಬ : ಅನಾರೋಗ್ಯ ಪೀಡಿತ ಮಹಿಳೆಯೋರ್ವರು ಕರೋನಾ ಸೋಂಕಿಗೆ ಭಯಪಟ್ಟು ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನ ಗ್ರಾಮದ ಹೊಸ್ಮಾರು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಹೊಸ್ಮಾರು ನಿವಾಸಿ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಕರೋನಾ ಸೋಂಕು ದೃಡಪಟ್ಟಿಲ್ಲವಾದರೂ ಸೋಂಕು ತಗಲುವ ಭೀತಿಯಿಂದ ಪತ್ರ ಬರೆದಿಟ್ಟು, ಮನೆಯ ಹಿಂಬದಿಯಲ್ಲಿ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮನೆಯ ತಾರಸಿಯಲ್ಲಿ ಗಾಂಜಾ ಗಿಡ ನೆಟ್ಟು ಪೊಲೀಸರಿಗೆ ಸಿಕ್ಕಿಬಿದ್ದ ಭೂಪ
  Ad Widget   Ad Widget   Ad Widget   Ad Widget   Ad Widget   Ad Widget