ನ್ಯೂಸ್ ನಾಟೌಟ್: ಸಾರ್ವಜನಿಕವಾಗಿ ಜನರಿಗಾಗಿ ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡುವವರೇ ನಿಜವಾದ ದೇವರು. ಜೀವದ ಹಂಗು ತೊರೆದು ಜನರ ಕಷ್ಟಗಳಿಗೆ ಆಗುವಂತಹ ಒಂದು ಆಂಬ್ಯುಲೆನ್ಸ್ ಸೇವೆ ಆರಂಭಿಸಬೇಕೆನ್ನುವ ಭೀಮರಾವ್ ಆರ್ಮಿ ಹೊಸಂಗಡಿ ಸಂಘಟನೆ ಕನಸು ನನಸಾಗಿದೆ.
ಭಾನುವಾರ ಆಂಬ್ಯುಲೆನ್ಸ್ ಸೇವೆ ದಾನಿಗಳ ಸಹಕಾರದ ಜೊತೆಗೆ ಲೋಕಾರ್ಪಣೆಗೊಂಡಿತು. ಪಡ್ಯಾರುಬೆಟ್ಟುವಿನ ಧರ್ಮದರ್ಶಿ ಎ. ಜೀವಂಧರ್ ಕುಮಾರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಂಬ್ಯುಲೆನ್ಸ್ ಸೇವೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಹೆಲ್ತ್ ಸೆಂಟರ್ ನ ಡಾ. ವಿನಯ್ ಆಳ್ವ, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಸೇರಿದಂತೆ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.