ಸುಳ್ಯ: ಹಿಂದೂ ಮುಖಂಡ, ಸುಳ್ಯದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಲತೇಶ್ ಗುಂಡ್ಯ (32 ವರ್ಷ) ಅವರಿಗೆ ಮತ್ತೆ ಗಡಿಪಾರು ನೋಟಿಸ್ ಜಾರಿಗೊಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಒಳಪಡುವ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಏಕೆ ಗಡಿಪಾರು ಮಾಡಬಾರದು..? ಎಂಬ ಕಾರಣ ಕೇಳುವ ನೋಟಿಸ್ ಗೆ ದಿನಾಂಕ 11-07-2025 ರಂದು ಪೂರ್ವಾಹ್ನ 11.30 ಕ್ಕೆ ಈ ನ್ಯಾಯಾಲಯಕ್ಕೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ ಲಿಖಿತ ವಿವರಣೆಯನ್ನು ಸಲ್ಲಿಸುವುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಲತೇಶ್ ಗುಂಡ್ಯ ಮೇಲೆ ಗಡಿಪಾರು ನೋಟಿಸ್ ಹಾಕಲಾಗಿತ್ತು.